ಕರ್ನಾಟಕ

ಬ್ಯಾಂಕ್ ಗ್ರಾಹಕನಿಗೆ 40 ಸಾವಿರ ರೂ. ಪಂಗನಾಮ

Pinterest LinkedIn Tumblr

atm

ಚಿಕ್ಕಬಳ್ಳಾಪುರ:  ಜಿಲ್ಲೆಯ ಗುಡಿಬಂಡೆ ತಾಲ್ಲೂಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರಿಂದ ಬ್ಯಾಂಕ್ ಗ್ರಾಹಕನಿಗೆ 40 ಸಾವಿರ ರೂ. ವಂಚನೆಯಾಗಿರುವ ಪ್ರಕರಣ ನಡೆದಿದೆ.

ತಾಲ್ಲೂಕಿನ ಗುಡಿಬಂಡೆ ತಾಲ್ಲೂಕಿನ ವರ್ಲಕೊಂಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಬತ್ತಲಹಳ್ಳಿ ಮುನಿಕೃಷ್ಣ ಎಂಬುವವರು ಬೀಚಗಾನಹಳ್ಳಿಯ ಕೆನರಾ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದಾರೆ.

ಇವರಿಗೆ ಅಪರಿಚಿತ ಕರೆಯೊಂದು ಬಂದಿದ್ದು, ನಾವು ಬ್ಯಾಂಕ್‌ನಿಂದ ಕರೆ ಮಾಡುತ್ತಿದ್ದೇವೆ, ನಿಮ್ಮ ಎಟಿಎಂ ಕಾರ್ಡ್ ಲಾಕ್ ಆಗಿದೆ. ಇದನ್ನು ಸರಿಪಡಿಸಲು ನಿಮ್ಮ ಎಟಿಎಂ ಕಾರ್ಡ್‌ನ ಸಂಖ್ಯೆ ನೀಡುವಂತೆ ಸೂಚಿಸಿದ್ದಾರೆ. ಅಪರಿಚಿತ ಕರೆಯನ್ನು ನಂಬಿದ ಮುನಿಕೃಷ್ಣ ಎಟಿಎಂ ಕಾರ್ಡ್ ನಂಬರ್‌ನ ಎಲ್ಲಾ ವಿವರ ನೀಡಿದ್ದಾರೆ.

ಅದಾದ ಕೆಲವೇ ನಿಮಿಷಗಳಲ್ಲಿ ಅವರ ಮೊಬೈಲ್‌ಗೆ 40 ಸಾವಿರ ರೂ. ಹಣ ವರ್ಗಾವಣೆಯಾಗಿದೆ ಎಂಬ ಎಸ್‌ಎಂಎಸ್ ಬಂದಿದೆ. ಇದರಿಂದ ಗಾಬರಿಗೊಂಡ ಮುನಿಕೃಷ್ಣ ಬ್ಯಾಂಕ್‌ಗೆ ತೆರಳಿ ಅಧಿಕಾರಿಗಳನ್ನು ವಿಚಾರಿಸಿದಾಗ ಅವರ ಖಾತೆಯಿಂದ 40 ಸಾವಿರ ರೂ. ವರ್ಗಾವಣೆಯಾಗಿರುವ ದೃಢಪಟ್ಟಿದೆ. ಗಾಬರಿಗೊಂಡ ಮುನಿಕೃಷ್ಣರವರು ಗೌರಿಬಿದನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Write A Comment