ಕರ್ನಾಟಕ

ನರಭಕ್ಷಕ ಚಿರತೆ ಬಾಯಿಗೆ ಸಿಕ್ಕಿದರೂ ಸಾವು ಗೆದ್ದು ಬಂದ ಕೂಲಿಗಳು…

Pinterest LinkedIn Tumblr

chik

ಚಿಕ್ಕಮಗಳೂರು: ಕೂಲಿ ಅರಸಿ ಬಂದಿದ್ದ ಮೂವರು ಕಾರ್ಮಿಕರ ಮೇಲೆ ಎರಗಿದ ಚಿರತೆಯೊಂದು ಮನ ಬಂದಂತೆ ಪರಚಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಕಡೂರು ತಾಲ್ಲೂಕಿನ ಎಂ.ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.ಭದ್ರಾವತಿಯ ನಿವಾಸಿಗಳಾದ ವೆಂಕಟೇಶ್, ಗೋವಿಂದ ಮತ್ತು ಮಣಿ ಚಿರತೆ ದಾಳಿಗೆ ಒಳಗಾದ ಕೂಲಿ ಕಾರ್ಮಿಕರು.ತಮ್ಮ ಕುಟುಂಬ ಸದಸ್ಯರೊಂದಿಗೆ ಕಬ್ಬು ಕಟಾವಿಗೆಂದು ಕೋಡಿಹಳ್ಳಿ ಗ್ರಾಮಕ್ಕೆ ಬಂದಿದ್ದು , ಕಳೆದ ಒಂದು ವಾರದಿಂದ ಕಬ್ಬು ಕಟಾವು ಕೆಲಸ ಮಾಡುತ್ತಿದ್ದರು. ಕಳೆದ ರಾತ್ರಿ ಸೆಕೆ ತುಂಬಾ ಇದ್ದ ಪರಿಣಾಮ ಟೆಂಟ್ನ ಹೊರಗಡೆ ಬಂದು ಮಲಗಿದ್ದರು.

ಈ ವೇಳೆ ಚಿರತೆ ಇವರ ಮೇಲೆ ಎರಗಿದ್ದು , ಗೋವಿಂದನ ಕಾಲನ್ನು ಹಿಡಿದು ಸ್ವಲ್ಪ ದೂರ ಎಳೆದುಕೊಂಡು ಹೋಗಿದೆ. ಈತನನ್ನು ರಕ್ಷಿಸಲು ಹೋದ ವೆಂಕಟೇಶ್ ಮತ್ತು ಮಣಿಯ ಮೇಲೆ ಎರಗಿ ಗಂಭೀರವಾಗಿ ಗಾಯಗೊಳಿಸಿದೆ. ಇವರ ಚೀರಾಟ ಕೇಳಿ ಅಕ್ಕಪಕ್ಕದ ನಿವಾಸಿಗಳು ಓಡಿ ಬಂದು ಚಿರತೆಯನ್ನು ಓಡಿಸಲು ಪ್ರಯತ್ನಿಸಿದ್ದಾರೆ. ಗಾಯಾಳುಗಳನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಯಿ, ಕುರಿ, ಹಸುಗಳನ್ನು ಬೇಟೆಯಾಡಲು ಗ್ರಾಮಗಳಿಗೆ ಲಗ್ಗೆ ಇಡುತ್ತಿದ್ದ ಚಿರತೆಗಳು ಈಗ ಮಾನವನ ಬೇಟೆಗೂ ಮುಂದಾಗಿದೆ ಎಂದು ಸ್ಥಳೀಯ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

Write A Comment