ಕರ್ನಾಟಕ

ಬೃಹತ್ ಮೆಟ್ರೊ ಮೆಜೆಸ್ಟಿಕ್ ನಿಲ್ದಾಣ

Pinterest LinkedIn Tumblr

A VIEW OF UNDER PASS  METRO WORK AT V.SOUDHA

ಬೆಂಗಳೂರು: ಮಿಸ್ಕ್ ಸ್ಕ್ವಯರ್ನಿಂದ ಮೆಜೆಸ್ಟಿಕ್ ನಿಲ್ದಾಣದವರೆಗೆ 5 ಅಂಡರ್ಗ್ರೌಡ್ ರೈಲು ನಿಲ್ದಾಣಗಳು ಬರಲಿದ್ದು, ಕಾಮಗಾರಿಗಳು ಸಂಪೂರ್ಣ ಮುಗಿದಿದ್ದು, ಸಣ್ಣಪುಟ್ಟ ಕೆಲಸಗಳಷ್ಟೆ ಬಾಕಿ ಇವೆ ಎಂದು ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ಸಿಂಗ್ ಕರೋಲಾ ಹೇಳಿದರು.

ಈ ಐದು ನಿಲ್ದಾಣಗಳಲ್ಲಿ ಮೆಜೆಸ್ಟಿಕ್ ನಿಲ್ದಾಣ ಅತಿ ದೊಡ್ಡ ನಿಲ್ದಾಣವಾಗಿದ್ದು, ಏಳೂವರೆ ಎಕರೆ ವಿಸ್ತೀರ್ಣ ಹೊಂದಿದೆ. ಭೂಮಿಯಿಂದ 70 ಅಡಿ ಅಂದರೆ 7 ಮಹಡಿಯಷ್ಟು ಭೂಮಿಯಿಂದ ಕೆಳಗಿದೆ ಎಂದರು.

ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಪೂರ್ವ ಪಶ್ಚಿಮ, ಉತ್ತರ-ದಕ್ಷಿಣದಿಂದ ಬರುವ ರೈಲುಗಳು ಇಂಟರ್ ಚೆಂಜ್ ಆಗಲಿದ್ದು, ಇದು ದೊಡ್ಡ ನಿಲ್ದಾಣ ಎಂದರು.

ವಿಧಾನಸೌಧದಿಂದ ಮೆಜೆಸ್ಟಿಕ್ಗೆ ಹೋಗುವ ಮಾರ್ಗ ಮಧ್ಯೆ ಬಸ್ನಲ್ಲಿ ವಿವರ ನೀಡಿದ ಅವರು, ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಕಾಮಗಾರಿ 7-8 ದಿನಗಳಲ್ಲಿ ಮುಗಿಯಲಿದೆ. ಅಲ್ಲಿ ಏಕಕಾಲಕ್ಕೆ 8 ಗುತ್ತಿಗೆದಾರರು ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದಾರೆ ಎಂದರು.

ಮೆಜೆಸ್ಟಿಕ್ ರೈಲು ನಿಲ್ದಾಣ ಒಂದೇ 6 ಪುಟ್ಬಾಲ್ ಮೈದಾನದಷ್ಟು ದೊಡ್ಡದಿದ್ದು, ಏಕಕಾಲಕ್ಕೆ 20 ಸಾವಿರ ಮಂದಿ ಪ್ರಯಾಣಿಕರು ಅಂಡರ್ ಗ್ರೌಂಡ್ ನಿಲ್ದಾಣದಲ್ಲಿ ಯಾವುದೇ ಅಡೆತಡೆ ಇಲ್ಲದೆ ಓಡಾಡಬಹುದಾಗಿದೆ ಎಂದು ಹೇಳಿದರು.

ಉತ್ತರ ದಕ್ಷಿಣ ಮಾರ್ಗದ ಕಾಮಗಾರಿ ಕೂಡಾ ಅಂತಿಮ ಹಂತದಲ್ಲಿದ್ದು, ಕೆಂಪೇಗೌಡ ನಿಲ್ದಾಣ ಸೇರುವ ಮೂರು ಸುರಂಗ ಮಾರ್ಗಗಳನ್ನು ನಿರ್ಮಿಸಲಾಗುತ್ತಿದೆ. ಇದರಲ್ಲಿ ಗೋದಾವರಿ, ಕೃಷ್ಣ ಮತ್ತು ಕಾವೇರಿ ಮೂರು ಸುರಂಗ ಕೊರೆಯುವ ಯಂತ್ರಗಳು ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿವೆ. ಸಂಪಿಗೆ ರಸ್ತೆಯಿಂದ ಕೆಂಪೇಗೌಡ ನಿಲ್ದಾಣಕ್ಕೆ ಬರುವ ಗೋದಾವರಿ ಯಂತ್ರ ಕೆಂಪೇಗೌಡ ನಿಲ್ದಾಣಕ್ಕೆ 40 ದಿನಗಳಲ್ಲಿ ವಾಪಸ್ಸಾಗಲಿದೆ. ಆನಂತರ ಸಂಪಿಗೆ ರಸ್ತೆ, ಕೆಂಪೇಗೌಡ ಬಸ್ ನಿಲ್ದಾಣದ ಹಳಿಜೋಡಣೆ ಆರಂಭವಾಗಲಿದ್ದು, ಜೂನ್ ಒಳಗೆ ಸಾರ್ವಜನಿಕರ ಸೇವೆಗೆ ಮುಕ್ತವಾಗಲಿದೆ ಎಂದು

ಚಿಕ್ಕಪೇಟೆಯಿಂದ ಕೆಂಪೇಗೌಡ ನಿಲ್ದಾಣಕ್ಕೆ ಬರುತ್ತಿರುವ ಕಾವೇರಿ ಯಂತ್ರ 130 ಮೀಟರ್ ದೂರದಲಿದ್ದು, ಮುಂದಿನ ಮೂರು ತಿಂಗಳೊಳಗಾಗಿ ಕೆಂಪೇಗೌಡ ನಿಲ್ದಾಣ ತಲುಪಲಿದ್ದು, ಆ ಬಳಿಕ ಸಿಟಿ ಮಾರ್ಕೆಟ್ನಿಂದ ಯಲಪೇನಹಳ್ಳಿ ವರೆಗೆ ಜುಲೈ ವೇಳೆಗೆ ಸಂಪರ್ಕ ಕಲ್ಪಿಸಲಾಗುವುದು ಎಂದರು.

ಸುರಂಗ ಮಾರ್ಗದ ಅರ್ಧ ಭಾಗವನ್ನು ಕ್ರಮಿಸಿರುವ ಕೃಷ್ಣ ಯಂತ್ರ, ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಜೂನ್ ಕೊನೆಯ ವೇಳೆಗೆ ತಲುಪುವ ನಿರೀಕ್ಷೆ ಇದೆ ಎಂದರು.

Write A Comment