ಕರ್ನಾಟಕ

ಶಿವರಾಜ್ ಕುಮಾರ್ ಅವರ ಮುಂದಿನ ಚಿತ್ರ ‘ಮೈ ನೇಮ್ ಇಸ್ ಆಂಜಿ’

Pinterest LinkedIn Tumblr

Shivarajkumar

ಬೆಂಗಳೂರು: ಮೂರು ದಶಕಗಳ ಕಾಲ ೧೧೦ಕ್ಕಿಂತಲೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿರುವ ಹಿರಿಯ ನಟ ಶಿವರಾಜ್ ಕುಮಾರ್ ಅವರಿಗೆ ಒಳ್ಳೆಯ ನಿರ್ದೇಶಕ ಜೋಡಿ ಸಿಗುವುದು ಸವಾಲೇ. ಆದರೆ ಇದಕ್ಕೆ ಅಪವಾದ ಎಂದರೆ ನಿರ್ದೇಶಕ ಹರ್ಷ. ‘ಭರ್ಜರಿ’ ಮತ್ತು ‘ವಜ್ರಕಾಯ’ ಸಿನೆಮಾಗಳಲ್ಲಿ ಹರ್ಷ ಅವರ ನಿರ್ದೇಶನದಲ್ಲಿ ನಟಿಸಿರುವ ನಟ ಈಗ ಮೂರನೇ ಸಿನೆಮಾ ‘ಮೈ ನೇಮ್ ಇಸ್ ಆಂಜಿ’ ಚಿತ್ರಕ್ಕೆ ಸಿದ್ಧರಾಗಿದ್ದಾರೆ. ಹರ್ಷ ನಿರ್ದೇಶಕರಾದ ಮೇಲೆ ಆಂಜಿ, ಆಂಜನೇಯನ ಸಣ್ಣ ಹೆಸರು ಎಂದು ವಿಶೇಷವಾಗಿ ಹೇಳಬೇಕಿಲ್ಲ.

ಇದರ ನಿರ್ಮಾಪಕ ಜಯಣ್ಣ. “ಜಯಣ್ಣ ಈಗಾಗಲೇ ಶಿವರಾಜ್ ಕುಮಾರ್ ಅವರ ‘ಬಂಗಾರ ಸನ್ ಆಫ್ ಬಂಗಾರದ ಮನುಷ್ಯ’ ನಿರ್ಮಿಸುತ್ತಿದ್ದು, ನಟನ ವೃತ್ತಿಪರತೆ ಮತ್ತು ಶಿಸ್ತು ನೋಡಿ ಅವರ ಮೇಲಿನ ಗೌರವ ಇಮ್ಮಡಿಯಾಗಿ ಮತ್ತೊಂದು ಯೋಜನೆಯನ್ನು ನಿರ್ಮಿಸಲು ಮುಂದಾಗಿದ್ದಾರೆ.

‘ಜೈ ಮಾರುತಿ ೮೦೦ರಲ್ಲಿ ಹರ್ಷ ಕೆಲಸ ಮಾಡುವ ವಿಧಾನವನ್ನು ನೋಡಿರುವ ಜಯಣ್ಣ, ಈ ಜೋಡಿಯ ಮೇಲೆ ಅಪಾರ ಭರವಸೆ ಇಟ್ಟಿದ್ದಾರೆ” ಎಂದು ಮೂಲಗಳು ತಿಳಿಸಿವೆ.

ಸದ್ಯಕ್ಕೆ ‘ಜೈ ಮಾರುತಿ ೮೦೦’ ಬಿಡುಗಡೆಗೆ ಹರ್ಷ ಸಿದ್ಧರಾಗುತ್ತಿದ್ದು, ದುನಿಯಾ ವಿಜಯ್ ಅವರ ಜೊತೆಗೆ ಮುಂದಿನ ಯೋಜನೆ ಕೈಗೆತ್ತಿಕೊಳ್ಳಲಿದ್ದಾರೆ. ‘ಸಂತೆಯಲ್ಲಿ ನಿಂತ ಕಬೀರ’ ಮುಗಿಸಿರುವ ಶಿವಣ್ಣ, ನಂತರ ‘ಬಂಗಾರ ಸನ್ ಆಫ್ ಬಂಗಾರದ ಮನುಷ್ಯ’ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಈ ಎಲ್ಲ ಪೂರ್ವನಿಯೋಜಿತ ಯೋಜನೆಗಳು ಮುಗಿದ ಮೇಲಷ್ಟೇ ಇಬ್ಬರೂ ಒಟ್ಟಿಗೆ ‘ಮೈ ನೇಮ್ ಇಸ್ ಅಂಜಿ’ಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ತಿಳಿಸಿವೆ ಮೂಲಗಳು.

Write A Comment