ಕರ್ನಾಟಕ

ಚುನಾವಣೆಗೆ ಸ್ಪರ್ಧಿಸೋಲ್ಲ,ರಾಜಕೀಯ ನಿವೃತ್ತಿ ಇಲ್ಲ: ಎಚ್.ಡಿ. ದೇವೇಗೌಡ

Pinterest LinkedIn Tumblr

Deve_Gowda

ಬೆಂಗಳೂರು: ಪ್ರಸಕ್ತ ಲೋಕಸಭಾ ಸದಸ್ಯತ್ವ ಅವಧಿ ಮುಗಿದ ಬಳಿಕ ತಾವು ಮತ್ತೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಹಾಗಂತ ರಾಜಕೀಯದಿಂದ ನಿವೃತ್ತಿಯನ್ನು ಹೊಂದುವುದಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಚುನಾವಣೆಯಲ್ಲಿ ಸ್ಪರ್ಧಿಸುವುದು ಅಧಿಕಾರಕ್ಕಾಗಿ. ಆದರೆ ಸಾರಥ್ಯ ವಹಿಸುವುದು ಪಕ್ಷವನ್ನು ಉಳಿಸಿ ಬೆಳೆಸುವುದಕ್ಕಾಗಿ. 2018ಕ್ಕೆ ವಿಧಾನಸಭೆಗೆ ಚುನಾವಣೆ ನಡೆಯಬಹುದು. ಆಗ ಜನಾದೇಶ ಏನಿರುತ್ತದೋ ಎಂಬುದನ್ನು ಈಗಲೇ ಊಹಿಸಲಾಗುವುದಿಲ್ಲ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಹ ಪಕ್ಷ ಅಧಿಕಾರಕ್ಕೆ ಬಾರದಿದ್ದರೆ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಕುಮಾರಸ್ವಾಮಿ ಏಕಾಂಗಿಯಾಗಿ ಹೋರಾಟ ಮಾಡಿ 40 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು. ಆದರೆ ತಾರಾ ಸಮೂಹವನ್ನೇ ಹೊಂದಿದ್ದ ಬಿಜೆಪಿ ಗೆದ್ದಿದ್ದೆಷ್ಟು ಎಂದು ಪ್ರಶ್ನಿಸಿದರು.ಮಹದಾಯಿ ಹೋರಾಟ, ಎತ್ತಿನಹೊಳೆ ಹೋರಾಟ ಕುಡಿಯುವ ನೀರಿನ ಹೋರಾಟ ಇದೆಲ್ಲವನ್ನು ನೋಡಿದರೆ ಪ್ರಾದೇಶಿಕ ಪಕ್ಷಗಳ ಅನಿವಾರ್ಯತೆ ಇದೆ ಎಂದು ಅವರು ಪ್ರತಿಪಾದಿಸಿದರು.

ಕಳಸಾ ಬಂಡೂರಿ ಹೋರಾಟದ ಹಿನ್ನೆಲೆಯಲ್ಲಿ ಮಧ್ಯ ಪ್ರವೇಶಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದರೂ ಏನೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳ ಜತೆ ರಾಷ್ಟ್ರೀಯ ಪಕ್ಷಗಳೇ ಹೊಂದಾಣಿಕೆ ಮಾಡಿಕೊಳ್ಳುತ್ತಿವೆ ಎಂದು ದೇವೇಗೌಡರು ಹೇಳಿದರು.

Write A Comment