ಕರ್ನಾಟಕ

ಮಾ.17ರಿಂದ 20ರವರೆಗೆ ಭಾರತೀಯ ಪನೋರಮಾ ಚಿತ್ರೋತ್ಸವ

Pinterest LinkedIn Tumblr

rajendra singh

ಬೆಂಗಳೂರು: ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಕೇಂದ್ರದ ವಾರ್ತಾ ಮತ್ತು ಪ್ರಚಾರ ಸಚಿವಾಲಯದ ವತಿಯಿಂದ ಮಾ.17ರಿಂದ 20ರವರೆಗೆ ಭಾರತೀಯ ಪನೋರಮಾ ಚಿತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ಈ ವಿಷಯವನ್ನು ತಿಳಿಸಿ ಮಾ.17ರಂದು ಸಂಜೆ 5 ಗಂಟೆಗೆ ಚಿತ್ರೋತ್ಸವ ಉದ್ಘಾಟನೆಗೊಳ್ಳಲಿದೆ. ನಂತರ ಮಲೆಯಾಳಂನ ವಟ್ಟಾಳ್ ಚಿತ್ರ ಪದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

18ರಿಂದ 20ರವರೆಗೆ ಬೆಳಗ್ಗೆ 9.30ರಿಂದ ಚಿತ್ರ ಪ್ರದರ್ಶಗಳು ಪ್ರಾರಂಭಗೊಳ್ಳಲಿವೆ. ಕಿರು ಸಾಕ್ಷ್ಯಚಿತ್ರ, ಕಿರುಚಿತ್ರ, ಪನೋರಮಾದಲ್ಲಿ ಆಯ್ಕೆಯಾದ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಜೊತೆಗೆ ಚಲನಚಿತ್ರ ಕುರಿತು ಕಾರ್ಯಾಗಾರಗಳು, ನಿರ್ದೇಶನ, ನಟನೆ, ಕಿರುಚಿತ್ರ ನಿರ್ಮಾಣ, ಹಾಸ್ಯಚಿತ್ರ, ನಿರ್ದೇಶನ ಮತ್ತಿತರ ವಿಷಯಗಳ ಕುರಿತು ತಿಳಿಸಿಕೊಡಲಾಗುತ್ತದೆ. 20ರಂದು ಸಂಚಾರಿ ವಿಜಯ್ ನಟಿಸಿರುವ ‘ನಾನು ಅವನಲ್ಲ ಅವಳು’ ಚಿತ್ರ ಪ್ರದರ್ಶನವಿದೆ. ಮಣಿಪುರಿ, ಮಲೆಯಾಳಂ, ಬೆಂಗಾಲಿ, ಮರಾಠಿ, ಬೋಜ್ಪುರಿ, ಸಿಂಧಿ, ಆಂಗ್ಲಭಾಷೆ ಸೇರಿದಂತೆ ಹಲವು ಭಾಷೆಗಳ ಹೆಸರಾಂತ ಚಿತ್ರಗಳು ಪನೋರಮಾದಲ್ಲಿ ಉತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ ಎಂದು ರಾಜೇಂದ್ರ ಸಿಂಗ್ ಬಾಬು ತಿಳಿಸಿದರು.

Write A Comment