
ಗುಂಡ್ಲುಪೇಟೆ (ಚಾಮರಾಜನಗರ): ತಾಲೂಕಿನ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯದಲ್ಲಿ ಮಂಗಳವಾರ ಮಧ್ಯಾಹ್ನ ಕಾಡ್ಗಿಚ್ಚು ಕಾಣಿಸಿಕೊಂಡು 100 ಎಕರೆಗೂ ಹೆಚ್ಚು ಪ್ರಮಾಣದ ಅರಣ್ಯ
ಸಂಪತ್ತು ನಾಶವಾಗಿದೆ. ಬಂಡೀಪುರ ದಲ್ಲಿರುವ ಪೊಲೀಸ್ ಉಪಠಾಣೆಯ ಹಿಂಭಾಗದಲ್ಲಿರುವ ಅರಣ್ಯ ಪ್ರದೇಶದಲ್ಲಿ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಅಲ್ಪ ಪ್ರಮಾಣದಲ್ಲಿ ಕಾಣಿಸಿಕೊಂಡ ಬೆಂಕಿಯು
ಕ್ಷಣಾರ್ಧದಲ್ಲೇ ಬೇಸಿಗೆಯ ಬಿರು ಬಿಸಿಲಿಗೆ ಒಣಗಿ ನಿಂತಿದ್ದ ಬಿದಿರಿನ ಬೊಂಬುಗಳಿಗೆ ತಗುಲಿ ಗಾಳಿಯ
ರಭಸಕ್ಕೆ ಬೆಂಕಿಯು ರೌದ್ರವಾತಾರ ತಾಳಿ ಸುಮಾರು 100 ಎಕರೆಗೂ ಹೆಚ್ಚು ಅರಣ್ಯ ಪ್ರದೇಶವನ್ನು ಭಸ್ಮಮಾಡಿದೆ.
ಕೂಡಲೇ ಬಂಡೀಪುರ, ಕುಂದಕೆರೆ, ಗೋಪಾಲಸ್ವಾಮಿ ಬೆಟ್ಟ ವಲಯದ ಅರಣ್ಯ ನೌಕರರನ್ನು ಕರೆಸಿ ಬೆಂಕಿಯು ಇನ್ನೂ ಹೆಚ್ಚಿನ ಪ್ರದೇಶಕ್ಕೆ ಹರಡದಂತೆ ಫೈರ್ಲೈನ್ ಮಾಡಲಾಯಿತು.
-ಉದಯವಾಣಿ