ಮನೋರಂಜನೆ

ಶಿವಣ್ಣ-ಸುದೀಪ್‌ ನಟನೆಯ ಕಲಿ ಸಾಂಗ್‌ ರೆಕಾರ್ಡಿಂಗ್‌ ಶುರು

Pinterest LinkedIn Tumblr

ಶಿವರಾಜಕುಮಾರ್‌-ಸುದೀಪ್‌ ಅಭಿನಯದ “ಕಲಿ’ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ಸುದ್ದಿಯಾಗಿದೆ. ಆದರೆ, ಚಿತ್ರ ಯಾವಾಗಿನಿಂದ ಶುರುವಾಗುತ್ತದೆ ಎಂಬ ವಿಷಯದ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಕಳೆದ ವಾರ ಪ್ರೇಮ್‌ ತಮ್ಮ ಕುಟುಂಬದವರ ಜೊತೆಗೆ ಮಂತ್ರಾಲಯಕ್ಕೆ ಹೋಗಿ ಸ್ಕ್ರಿಪ್ಟ್ ಪೂಜೆ ಮಾಡಿಸಿಕೊಂಡು ಬರುವ ಮೂಲಕ ಚಿತ್ರಕ್ಕೆ ಚಾಲನೆ ಕೊಟ್ಟಿದ್ದರು. ಈಗ ಅವರು ಸದ್ದಿಲ್ಲದೆ ಹಾಡುಗಳ ರೆಕಾರ್ಡಿಂಗ್‌ ಶುರು ಮಾಡುವ ಮೂಲಕ, ಚಿತ್ರ ಶುರುವಾಗುವುದೇ ಸಂಶಯ ಎಂಬ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.SUDEEP SHIVANNA

ಸೋಮವಾರ ಶಿವರಾತ್ರಿಯ ದಿನ ಹಂಸಲೇಖ ಸ್ಟುಡಿಯೋದಲ್ಲಿ “ಕಲಿ’ ಚಿತ್ರಕ್ಕೆ ಹಾಡುಗಳ ರೆಕಾರ್ಡಿಂಗ್‌ ಪ್ರಾರಂಭವಾಗಿದೆ. ಪ್ರೇಮ್‌ ಮತ್ತು ಅವರ ತಂಡದವರು ಹಂಸಲೇಖ ಅವರ ಸ್ಟುಡಿಯೋಗೆ ಹೋಗಿ, ಪೂಜೆ ಮಾಡಿಸಿ, ಹಂಸಲೇಖ ಅವರಿಂದ ಚಿತ್ರದ ಮೊದಲ ಹಾಡಿನ ಕೆಲಸ ಶುರು ಮಾಡಿಸಿದ್ದಾರೆ. ಇದಕ್ಕೂ ಮುನ್ನ ಗುರುಕಿರಣ್‌, ವಿ. ಹರಿಕೃಷ್ಣ, ಆರ್‌ .ಪಿ. ಪಟ್ನಾಯಕ್‌ ಮುಂತಾದವರ ಜೊತೆಗೆ ಕೆಲಸ ಮಾಡಿದ್ದರು.

ಕಾರಣಾಂತರಗಳಿಂದ ಹಂಸಲೇಖ ಜೊತೆಗೆ ಪ್ರೇಮ್‌ ಕೆಲಸ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲವಂತೆ. ಈಗ ಮೊದಲ ಬಾರಿಗೆ “ಕಲಿ’ ಚಿತ್ರದಲ್ಲಿ ಹಂಸಲೇಖ ಮತ್ತು ಪ್ರೇಮ್‌ ಒಟ್ಟಾಗಿದ್ದಾರೆ ಎಂಬುದು ವಿಶೇಷ. ಚಿತ್ರದ ಇನ್ನೊಂದು ವಿಶೇಷವೆಂದರೆ, ಒಟ್ಟು ಆರು ಸಂಗೀತ ನಿರ್ದೇಶಕರು ಒಂದೊಂದು ಹಾಡುಗಳನ್ನು ಕಂಪೋಸ್‌ ಮಾಡುತ್ತಿರುವುದು.

ಮೊದಲ ಹಾಡನ್ನು ಹಂಸಲೇಖ ಅವರು ಸಂಯೋಜಿಸಿದರೆ, ಮಿಕ್ಕ ಐದು ಹಾಡುಗಳನ್ನು ಗುರುಕಿರಣ್‌, ವಿ. ಹರಿಕೃಷ್ಣ, ಸಾಧು ಕೋಕಿಲ, ಅನೂಪ್‌ ಸೀಳಿನ್‌ ಮತ್ತು ಅರ್ಜುನ್‌ ಜನ್ಯ ಅವರು ಸಂಯೋಜಿಸುತ್ತಿದ್ದಾರಂತೆ. ಮುಂದಿನ ದಿನಗಳು ಒಬ್ಬೊಬ್ಬರೇ ಸಂಗೀತ ನಿರ್ದೇಶಕರು ತಮ್ಮ ಕೆಲಸವನ್ನು ಪ್ರಾರಂಭ ಮಾಡಲಿದ್ದಾರೆ.

ಸಿ.ಆರ್‌. ಮನೋಹರ್‌ ನಿರ್ಮಿಸುತ್ತಿರುವ ಈ ಚಿತ್ರವು ಮೇನಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
-ಉದಯವಾಣಿ

Write A Comment