ಕರ್ನಾಟಕ

ರಾಜ್ಯಮಟ್ಟದ ಪ್ರಶಸ್ತಿಗೆ ಬಾಜನರಾದ ಇಡಗೂರು ಗ್ರಾಮದ ಸ್ತ್ರೀಶಕ್ತಿ ಸಂಘಗಳು

Pinterest LinkedIn Tumblr

rajyaಗೌರಿಬಿದನೂರು, ಮಾ.8- ಕಾಲ ಬದಲಾದಂತೆ ಎಲ್ಲಾ ಕ್ಷೇತ್ರಗಳಲ್ಲೂ ಸಹ ಹೊಸ ಹೊಸ ಬದಲಾವಣೆಯಾಗುತ್ತಿದೆ ಅದೇ ರೀತಿ ಮಹಿಳೆಯರು ಸಹ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮದೇ ಆದಂತಹ ಸಾಧನೆಯನ್ನು ಮಾಡುತ್ತಿದ್ದಾರೆ, ಇದಕ್ಕೆ  ಇಡಗೂರು ಗ್ರಾಮದ ಸ್ತ್ರೀ ಶಕ್ತಿ ಸಂಘಗಳು ರಾಜ್ಯ ಮಟ್ಟದ ಪ್ರಶಸ್ತಿಗೆ ಭಾಜನವಾಗಿರುವುದು ಸಾಕ್ಷಿಯಾಗಿದೆ.  ಇಡಗೂರು ಗ್ರಾಮ ತನ್ನದೇ ಆದ ಇತಿಹಾಸವನ್ನು ಹೊಂದಿದೆ ಗ್ರಾಮದಲ್ಲಿ ರುದ್ರಕವಿ ಮೈಸೂರು ಸಂಸ್ಥಾನದಲ್ಲಿ ಕವಿಗಳಾಗಿದ್ದರು,  ಡಾ.ಎಲ್.ಬಸವರಾಜು ರವರು ಸಾಹಿತ್ಯ ಕ್ಷೇತ್ರದಲ್ಲೇ ತಮ್ಮದೇ ಆದಂತಹ ಚಾಪುಮೂಡಿಸಿದ್ದಾರೆ.

ಇತಿಹಾಸ ಹೊಂದಿರುವ ಇಡಗೂರು ಗ್ರಾಮ, ಮಹಿಳಾ ಸ್ವಸಹಾಯ ಸಂಘಗಳು ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿರುವುದು ಗ್ರಾಮದ ಕೀರ್ತಿಯ ಕಿರೀಟಕ್ಕೆ ಮತ್ತೊಂದು ಗರಿಸೇರ್ಪಡೆಯಾದಂತಾಗಿದೆ. 2001ರಲ್ಲಿ ಶ್ರೀ ಗಂಗಾಭಿಕ ಸ್ತ್ರೀ ಶಕ್ತಿ ಸ್ವಸಹಾಯ ಸಂಘ 19 ಮಂದಿ ಸದಸ್ಯರೊಂದಿಗೆ ಪ್ರಾರಂಭಗೊಂಡು ಗುಂಪು ಚಟುವಟಿಕೆಗಳಾದ ಹಪ್ಪಳ, ಸಂಡಿಗೆ, ಪೇಣಿ, ಚಕ್ಕುಲಿ, ಚಟ್ನಿಪುಡಿ , ರಾಗಿಮಾಲ್ಟ್ ಗಳನ್ನು ತಯಾರಿಸಿ ಆದಾಯೋತ್ಪನ್ನದಲ್ಲಿ ತೊಡಗಿಸಿಕೊಂಡರು. ಇದರ ಜೊತೆಗೆ ಸ್ವಚ್ಛತಾ ಕಾರ್ಯಕ್ರಮ ಉಚಿತ ಆರೋಗ್ಯ ತಪಾಸಣಾ ಶಿಬಿರ, ಮರಳು ಸಾಗಾಣಿಕೆ ತಡೆಯುವ ಮೂಲಕ ಪರಿಸರ ಕಾಳಜಿಯನ್ನು ವಹಿಸಿಕೊಂಡು ಬಂದಿರುವುದನ್ನು 2014-15ನೇ ಸಾಲಿನಲ್ಲ್ಲಿ ರಾಜ್ಯ ಸರಕಾರ ಗುರುತಿಸಿ ದ್ವಿತೀಯ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಇದೇ ಗ್ರಾಮದಲ್ಲಿನ ಶ್ರೀ ಲಕ್ಷ್ಮೀ ಸ್ತ್ರೀಲಕ್ಷ್ಮಿ ಸ್ವಸಹಾಯ ಸಂಘವೂ ಸಹ ತನ್ನ ಅಭಿವೃದ್ದಿಯಲ್ಲಿ ಸಾಧನೆ ಮಾಡುವುದರ ಜೊತೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಕಾರ್ಯಕ್ರಮಗಳಾದ  ಪೌಷ್ಟಿಕ ಆಹಾರ ಶಿಬಿರ, ಲಸಿಕಾ ಕಾರ್ಯಕ್ರಮ ಹಾಗೂ ತಾಯಂದಿರ ಛಾವಡಿ(ಮಹಿಳೆಯರ ಮತ್ತು ಮಕ್ಕಳ ಸಾಗಾಟ ತಡೆಯುವ)ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರುವ ಹಿನ್ನೆಲೆಯಲ್ಲಿ  2015-16ನೇ ಸಾಲಿನ ದ್ವಿತೀಯ ಸ್ಥಾನದ ರಾಜ್ಯ ಪ್ರಶಸ್ತಿಯನ್ನು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನದಂದು ಪ್ರಧಾನ ಮಾಡುತ್ತಿರುವುದು ತಾಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ.

ಸ್ತ್ರೀ ಶಕ್ತಿ ಸಂಘಗಳ ಸದಸ್ಯರು ಉತ್ಪಾಧಿಸುವ ವಸ್ತುಗಳನ್ನು ಮಾರಾಟ ಮಾಡಲು ಪ್ರತಿ ತಾಲೂಕು ಕೇಂದ್ರಕ್ಕೆ ತಮ್ಮ ಅನುದಾನದಿಂದ ಮೊಬೈಲ್ ಯೂನಿಟ್ಟ ವ್ಯಾನ್ ಒದಗಿಸಲಾಗಿದೆ, ಇದರಿಂದ ಸ್ತ್ರೀಶಕ್ತಿ ಸಂಘಗಳು ತಯಾರಿಸಿದ ವಸ್ತುಗಳಿಗೆ ಉತ್ತಮ ಮಾರುಕಟ್ಟೆ ಲಭಿಸಿದಂತಾಗಿದೆ ಜೊತೆಗೆ ಸಂಘಗಳ ಆರ್ಥಿಕ ಅಭಿವೃದ್ದಿ ವೃದ್ದಿಯಾಗುತ್ತಿದೆ ಎಂದು ವಿಧಾನಸಭೆ ಉಪಾಧ್ಯಕ್ಷ ಎನ್.ಎಚ್.ಶಿವಶಂಕರರೆಡ್ಡಿ  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ತಾಲೂಕಿನಲ್ಲಿ ಶೇ.80 ಸ್ತ್ರೀಶಕ್ತಿ ಸಂಘಗಳು ಅಭಿವೃದ್ದಿ ಸಾಧಿಸಿದೆ, ಅನಕ್ಷರಸ್ಥರೂ ಸಹ ಬ್ಯಾಂಕ್‌ಗಳಲ್ಲಿ ವಹಿವಾಟು ನಡೆಸುತ್ತಿದ್ದಾರೆ ಎಂದು ಸಿಡಿಪಿಒ ರಾಜೇಂದ್ರಪ್ರಸಾದ್ ತಿಳಿಸಿದರು.

Write A Comment