
ಬೆಂಗಳೂರು: 13 ವರ್ಷದ ಮಗನ ಮುಂದೆಯೇ 36 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಹೆಚ್‍ಎಸ್‍ಆರ್ ಲೇಔಟ್‍ನ ಎ.ಕೃಷ್ಣಪ್ಪ ಲೇಔಟ್‍ನಲ್ಲಿ ನಿನ್ನೆ ತಡರಾತ್ರಿ ಈ ಘಟನೆ ನಡೆದಿದ್ದು, ಗೃಹಿಣಿಯ 13 ವರ್ಷದ ಪುತ್ರನ ಕಣ್ಣೆದುರೇ ಕಾಮುಕರ ಅಟ್ಟಹಾಸ ಮೆರೆದಿದ್ದಾರೆ.
ಸಂತ್ರಸ್ತೆ ಗೃಹಿಣಿ ಕಳೆದ 5 ವರ್ಷಗಳಿಂದ ತಮ್ಮ ಪತಿಯಿಂದ ದೂರವಿದ್ದು, 13 ವರ್ಷದ ಮಗನ ಜೊತೆ ವಾಸವಿದ್ದರು. ತಮ್ಮ ಮನೆಗೆ ಆಗಾಗ ಬರುತ್ತಿದ್ದ ಪರಿಚಯಸ್ಥ ಬ್ರಹ್ಮಾನಂದ ರೆಡ್ಡಿ ಎಂಬಾತ ಹಾಗೂ ಸಂಬಂಧಿಕರಾದ ಸಂತೋಷ್ ರೆಡ್ಡಿ ಹಾಗೂ ಆತನ ಸ್ನೇಹಿತರು ಸೇರಿ ಈ ಕೃತ್ಯ ಎಸಗಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಾರೆ.
ಅತ್ಯಾಚಾರ ನಡೆಸಿದವರ ಪೈಕಿ ಸಂತೋಷ್ ರೆಡ್ಡಿ ಎಂಬಾತ ಹಾಲನಾಯಕನಹಳ್ಳಿ ಗ್ರಾಮ ಪಂಚಾಯತ್ ಸದಸ್ಯೆಯ ಪತಿ ಮತ್ತು ಆತನ ಸ್ನೇಹಿತರು ಎಂದು ತಿಳಿದುಬಂದಿದೆ.
ಹೆಚ್‍ಎಸ್‍ಆರ್ ಲೇಔಟ್ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಶೀಘ್ರವೇ ಉಳಿದ ಆರೋಪಿಗಳನ್ನು ಬಂಧಿಸಲಾಗುವುದು. ಸಂತ್ರಸ್ತ ಮಹಿಳೆಗೆ ನ್ಯಾಯ ಕೊಡಿಸುವುದಾಗಿ ಆಗ್ನೇಯ ವಲಯ ಡಿಸಿಪಿ ಬೋರೆಲಿಂಗಯ್ಯ ತಿಳಿಸಿದ್ದಾರೆ.