
ನವದೆಹಲಿ: ಧೋನಿ ವಿಶ್ವ ಕ್ರಿಕೆಟ್ನ ಶ್ರೇಷ್ಠ ಫಿನಿಶರ್ ಎಂದು ಕೊಹ್ಲಿ ಹೊಗಳಿದ್ದಾರೆ. ಭಾರತ ಟಿ-20 ಮತ್ತು ಏಕದಿನ ತಂಡದ ನಾಯಕ ಎಂ. ಎಸ್. ಧೋನಿ ಕುರಿತು ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಮಿರ್ಪುರ್ನಲ್ಲಿ ಭಾನುವಾರ ಬಾಂಗ್ಲಾದೇಶದ ವಿರುದ್ಧ ನಡೆದ ಏಷ್ಯಾ ಕಪ್ ಟಿ-20 ಟೂರ್ನಿಯ ಫೈನಲ್ನಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಭಾರತಕ್ಕೆ ಧೋನಿ ಸುಲಭ ಗೆಲುವು ತಂದಿತ್ತಿದ್ದರು. ಕೇವಲ 6 ಎಸೆತಗಳಲ್ಲಿ ಧೋನಿ ಭರ್ಜರಿ 20 ರನ್ ಗಳಿಸಿದ್ದರು.
ಶಿಖರ್ ಧವನ್ ಉತ್ತಮವಾಗಿ ಆಟವಾಡಿದ್ದರು. ಈ ವೇಳೆ ಒಂದು ಬದಿಯಲ್ಲಿ ಉತ್ತಮವಾಗಿ ಆಡುವುದು ಮತ್ತು ಉತ್ತಮ ರನ್ ರೇಟ್ ಕಾಯ್ದುಕೊಳ್ಳುವುದು ನನ್ನ ಗುರಿಯಾಗಿತ್ತು. ಧವನ್ ಔಟಾದ ಬಳಿಕ ನನ್ನ ಮೇಲೆ ಹೆಚ್ಚಿನ ಜವಾಬ್ದಾರಿ ಬಿದ್ದಿತು. ಆದರೆ ಧೋನಿ ಕ್ರೀಸ್ ಗೆ ಬಂದಾಗ ನಾನು ನಿರಾಳನಾದೆ. ಅಲ್ಲದೆ ತಾವೊಬ್ಬ ಬೆಸ್ಟ್ ಫಿನಿಶರ್ ಎಂಬುದನ್ನು ಧೋನಿ ಮತ್ತೊಮ್ಮೆ ಸಾಬೀತುಪಡಿಸಿದರ, ಧೋನಿಯ ಕೆಲಸ ಎಲ್ಲರಿಗಿಂತ ದೊಡ್ಡದು ಎಂದಿದ್ದಾರೆ. ಎಂದು ಕೊಹ್ಲಿ ಹಾಡಿ ಹೊಗಳಿದ್ದಾರೆ.
ಧವನ್ ಮತ್ತೆ ಫಾರ್ಮ್ಗೆ ಮರಳಿದ್ದಾರೆ. ಅಂತೆಯೇ ತಮ್ಮ ಆಟ ನೈಜವಾಗಿ ಆಡುತ್ತಿದ್ದೇನೆ. ತಂಡದ ಆಟಗಾರರು ಉತ್ತಮ ಫಾರ್ಮ್ನಲ್ಲಿರುವುದು ಮುಂಬರುವ ಟಿ-20 ವಿಶ್ವಕಪ್ ಟೂರ್ನಿಗೂ ಮುನ್ನ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಕೊಹ್ಲಿ ಹೇಳಿದ್ದಾರೆ.