ಕರ್ನಾಟಕ

ಮೊಬೈಲ್ ರೀಚಾರ್ಜ್ ಮಾಡಲು ನಿರಾಕರಿಸಿದ್ದಕ್ಕಾಗಿ ಕೊಲೆಯಾದ ಅಂಗಡಿ ಮಾಲೀಕ

Pinterest LinkedIn Tumblr

reಬೆಂಗಳೂರು, ಮಾ.6- ಮೊಬೈಲ್ ರೀಚಾರ್ಜ್ ಮಾಡಲು ನಿರಾಕರಿಸಿದ್ದಕ್ಕಾಗಿ ಅಂಗಡಿ ಮಾಲೀಕನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಕಳೆದ ರಾತ್ರಿ ಮಡಿವಾಳದ ಪಾಪಣ್ಣ ಬಡಾವಣೆ ಕೆಇಬಿ ರಸ್ತೆಯಲ್ಲಿ ನಡೆದಿದೆ. ಮೃತನನ್ನು ಮೊಹಮ್ಮದ್ ನಾಸೀರ್(27) ಎಂದು ಗುರುತಿಸಲಾಗಿದೆ.

ಕಳೆದ ನಾಲ್ಕು ವರ್ಷಗಳಿಂದ ನಾಸೀರ್ ಇಲ್ಲಿ ಮೊಬೈಲ್ ಅಂಗಡಿಯನ್ನು ಇಟ್ಟುಕೊಂಡಿದ್ದರು. ಕಳೆದ ರಾತ್ರಿ ಸುಮಾರು 10ಗಂಟೆಯಲ್ಲಿ ಅಮಾನ್ ಎಂಬ ವ್ಯಕ್ತಿ ಮೊಬೈಲ್ ರೀಚಾರ್ಜ್ ಮಾಡಿಸಲು ಬಂದಿದ್ದಾನೆ.

ಈಗ ಆಗುವುದಿಲ್ಲ. ಬೆಳಗ್ಗೆ ಬನ್ನಿ ಎಂದು ನಾಸೀರ್ ಹೇಳಿದಕ್ಕೆ ಮಾತಿನ ಚಕಮಕಿ ನಡೆದಿದೆ. ಸ್ಥಳೀಯರು ಜಗಳವನ್ನು ಬಿಡಿಸಿದ್ದಾರೆ. ನಂತರ ಅಂಗಡಿ ಮುಚ್ಚಿ ನಾಸೀರ್ ಮನೆಗೆ ಹೋಗಲು ಸ್ಕೂಟರ್ ಸ್ಟಾಟ್ ಮಾಡುತ್ತಿದ್ದಾಗ ಹಿಂದಿನಿಂದ ಬಂದ ಅಮಾನ್ ಚಾಕುವಿನಿಂದ ಆತನಿಗೆ ಇರಿದು ಪರಾರಿಯಾಗಿದ್ದಾನೆ. ಇದನ್ನು ಕಂಡ ಕೆಲವರು ತಕ್ಷಣ ನಾಸೀರ್‌ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರಾದರೂ ತೀವ್ರ ರಕ್ತಸ್ರಾವದಿಂದ ಆತ ರಾತ್ರಿಯೇ ಮೃತಪಟ್ಟಿದ್ದಾನೆ. ಸುದ್ದಿ ತಿಳಿದ ಮಡಿವಾಳ  ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿ ಅಮಾನ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡಿಸಿಪಿ ಬೋರಲಿಂಗಯ್ಯ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮಡಿವಾಳ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

Write A Comment