ಕರ್ನಾಟಕ

ಕಿಡಿಗೇಡಿಗಳ ಕೃತ್ಯಕ್ಕೆ ಸುಮಾರು 20 ಎಕರೆ ಅರಣ್ಯ ನಾಶ

Pinterest LinkedIn Tumblr

forestಅರಕಲಗೂಡು, ಮಾ.6-ಪಟ್ಟಣ ಸಮೀಪದ ಕಣಿವೆ ಬಸಪ್ಪ ಅರಣ್ಯ ಪ್ರದೇಶದಲ್ಲಿ ಕಿಡಿಗೇಡಿಗಳು ಇಟ್ಟ ಬೆಂಕಿಗೆ ಸುಮಾರು 20 ಎಕರೆ ಕಾಡು ಸುಟ್ಟು ಭಸ್ಮವಾಗಿದ್ದು ಪ್ರಾಣಿಗಳಿಗೆ ತೀವ್ರ ತೊಂದರೆಯಾಗಿದೆ. ಶುಕ್ರವಾರ ಸಂಜೆ ತೇಜೂರು ಗ್ರಾಮದ ಕೃಷಿ ಜಮೀನು ಹಾಗೂ ಸಮೀಪದ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಒಣಗಿದ ತರಗೆಲೆ ಮರಮಟ್ಟು ದಹಿಸಿ ಸಣ್ಣ ಪ್ರಮಾಣದ ಕುರುಚಲು ಪ್ರದೇಶ ನಾಶವಾಗಿದೆ.

ಅರಣ್ಯ ರಕ್ಷಕರು, ಅಧಿಕಾರಿಗಳು, ಗ್ರಾಮಸ್ಥರು ಸರಿರಾತ್ರಿವರೆಗೂ ಶ್ರಮಿಸಿದರೂ  ಪ್ರಯೋಜನವಾಗಿರಲಿಲ್ಲ. ಬೆಂಕಿ ನಿನ್ನೆಯೂ ಮುಂದುವರೆದು ಕಣಿವೆ ಬಸಪ್ಪ ಅರಣ್ಯ ಸಂಪೂರ್ಣವಾಗಿ ಹೊಗೆಯಿಂದ ಕೂಡಿರುವುದರಿಂದ ಪ್ರಾಣಿ ಪಕ್ಷಿಗಳು ಭಯಭೀತವಾಗಿದ್ದರೆ, ಸಾರ್ವಜನಿಕರು ಕಾಡಿನೊಳಕ್ಕೆ ಹೋಗಲು ಸಾಧ್ಯವಿಲ್ಲದಂತಾಗಿದೆ.  ನಿರ್ಲಕ್ಷ್ಯ: ಅರಣ್ಯ ಸಂರಕ್ಷಣೆಗೆ ಸಾಕಷ್ಟು ಕ್ರಮವನ್ನು ಸರಕಾರ ಕೈಗೊಂಡಿದೆ.ಆದರೆ ಅರಣ್ಯ ಇಲಾಖೆ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಇರುವ ಕಾಡನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ.

ಕಣಿವೇ ಬಸಪ್ಪ ಅರಣ್ಯದಲ್ಲಿ ಇಬ್ಬರು ರಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರ.ಹೀಗಿದ್ದರೂ ಕೂಡ ಬೆಂಕಿ ಕಾಣಿಸಿಕೊಂಡಿದೆ.ಆರಂಭದಲ್ಲಿಯೇ ಇದನ್ನು ನಿಯಂತ್ರಿಸುವ ಪ್ರಯತ್ನ ಆಗಿದ್ದರೇ ಹತ್ತಾರು ಎಕರೆಯಲ್ಲಿ ಕಾಣಿಸಿಕೊಳ್ಳುವ ಬೆಂಕಿಯನ್ನು ತಡೆಯಬಹುದಿತ್ತು ಎಂದು ತೇಜೂರು ಗ್ರಾಮದ ಚಂದ್ರೇಗೌಡ,ಸ್ವಾಮಿ ಆರೋಪಿಸಿದ್ದಾರೆ.

Write A Comment