ಮಂಡ್ಯ: ಮಂಡ್ಯ ಜಿಲ್ಲೆ ಚಿಕ್ಕ ಮಂಡ್ಯ ಗ್ರಾಮದ ಬಳಿ ಚಿಂದಿ ಆಯುವ ಮಹಿಳೆಯೊಬ್ಬಳು ರಸ್ತೆಯಲ್ಲೆ ಮಗುವಿಗೆ ಜನ್ಮ ನೀಡಿದ್ದಾಳೆ. ದುರದೃಷ್ಟವಶಾತ್ ಸೂಕ್ತ ಆರೈಕೆ ಸಿಗದ ಕಾರಣ ಜನಿಸಿದ ಕೆಲವೇ ನಿಮಿಷಗಳಲ್ಲಿ ಮಗು ಸಾವನ್ನಪ್ಪಿದೆ. ಗ್ರಾಮದ ಮಂಗಳಮ್ಮ ಎಂಬುವರು ಇಂತಹ ವಿಲಕ್ಷಣ ಘಟನೆಗೆ ಸಾಕ್ಷಿಯಾಗಿದ್ದಾರೆ.
ದಾರಿಹೋಕರು ಪೊಲೀಸರಿಗೆ ವಿಷಯ ತಿಳಿಸಿದ ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಅಂಬುಲೆನ್ಸ್ ಕರೆಸಿ ಬಾಣಂತಿ ಮತ್ತು ಮೃತ ಮಗುವನ್ನು ಮಂಡ್ಯ ವಿಮ್್ಸ ಆಸ್ಪತ್ರೆಗೆ ದಾಖಲಿಸಿದ್ದಾರೆ.