ರಾಷ್ಟ್ರೀಯ

ಸರ್ವರಿಗೂ ವಸತಿ, ಗ್ರಾಮ ಪಂಚಾಯ್ತಿಗಳಿಗೆ ಬ್ರಾಡ್​ಬ್ಯಾಂಡ್

Pinterest LinkedIn Tumblr

MOನವದೆಹಲಿ: ಸರ್ವರಿಗೂ ಸೂರು ಮತ್ತು ಇ-ಆಡಳಿತಕ್ಕೆ ಅನುಕೂಲವಾಗುವಂತೆ ಎಲ್ಲಾ ಗ್ರಾಮ ಪಂಚಾಯ್ತಿಗಳಿಗೆ ಬ್ರಾಡ್​ಬ್ಯಾಂಡ್ ಒದಗಿಸುವ ಸರ್ಕಾರದ ಭರವಸೆಯನ್ನು ಜಾರಿಗೊಳಿಸುವ ಕಾರ್ಯವನ್ನು ತ್ವರಿತಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

ವಿದ್ಯುತ್, ತೈಲ, ಅನಿಲ ಮತ್ತು ನವೀಕರಿಸಬಹುದಾದ ಇಂಧನ, ಕಲ್ಲಿದ್ದಲು, ವಸತಿ ಮತ್ತು ಬಂದರುಗಳು ಮತ್ತು ‘ಡಿಜಿಟಲ್ ಇಂಡಿಯಾ’ ಕಾರ್ಯಕಮ ಸೇರಿದಂತೆ ರಾಷ್ಟ್ರದ ಪ್ರಮುಖ ಮೂಲಸವಲತ್ತು ರಂಗಗಳ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಪ್ರಧಾನಿ ಈ ನಿರ್ದೇಶನಗಳನ್ನು ನೀಡಿದರು.

ಎಲ್ಲಾ ವಿದ್ಯುತ್ ರಹಿತ ಗ್ರಾಮಗಳ ವಿದ್ಯುದೀಕರಣ ಕಾರ್ಯಕ್ರಮವನ್ನು ತ್ವರಿತಗತಿಯನ್ನು ನಡೆಸಲಾಗುತ್ತಿದೆ. ವಿದ್ಯುತ್ ಇಲ್ಲದ ಸುಮಾರು 18,500 ಗ್ರಾಮಗಳ ಪೈಕಿ 6000 ಗ್ರಾಮಗಳಿಗೆ ಈಗಾಗಲೇ ಈಗಾಗಲೇ ವಿದ್ಯುತ್ ಕಲ್ಪಿಸಲಾಗಿದೆ ಎಂದು ಪ್ರಧಾನಿಯವರಿಗೆ ತಿಳಿಸಲಾಯಿತು ಎಂದು ಅಧಿಕೃತ ಹೇಳಿಕೆ ಪ್ರಕಟಿಸಿದೆ.

ನವೀಕರಿಸಬಹುದಾದ ಇಂಧನ, ಗಮನಾರ್ಹವಾಗಿ ರಾಷ್ಟ್ರಾದ್ಯಂತ ಎಲ್​ಇಡಿ ಬಲ್ಬ್ ವಿತರಣೆ ಕಾರ್ಯದ ಪ್ರಗತಿ ಬಗ್ಗೆ ಮೋದಿ ಅವರು ವಿಶೇಷ ಆಸಕ್ತಿ ತೋರಿದರು ಎಂದು ಹೇಳಿಕೆ ತಿಳಿಸಿದೆ.

Write A Comment