ಕರ್ನಾಟಕ

ಪ್ರೀತಿ ಮಾಡಿದಕ್ಕೆ ದಲಿತ ಯುವಕನ ಮನೆ ಮೇಲೆ ದಾಳಿ

Pinterest LinkedIn Tumblr

racism-650x250-620x250ವಿಜಯಪುರ: ಮೇಲ್ಜಾತಿಯ ಯುವತಿಯನ್ನು ಪ್ರೀತಿಸುತ್ತಿದ್ದಕ್ಕೆ ದಲಿತ ಯುವಕನ ಮನೆ ಮೇಲೆ ದಾಳಿ ಮಾಡಲಾಗಿದೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಲಕ್ಕುಂಡಿ ಗ್ರಾಮದ ಸೋಮಪ್ಪ ಮಾದರ ಎಂಬ ಯುವಕ 2 ವರ್ಷದಿಂದ ಮೇಲ್ಜಾತಿಯ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಇವರ ಪ್ರೀತಿಗೆ ಮೇಲ್ಜಾತಿಯ ಯುವತಿಯ ಪೋಷಕರಿಂದ ವಿರೋಧವಿತ್ತು. ಈ ಹಿಂದೆಯೂ ಕೂಡ ಯುವತಿಯ ತಂದೆ ನಿಂಗಪ್ಪ ಇನಾಪುರ ಯುವಕನಿಗೆ ಎಚ್ಚರಿಕೆಯನ್ನು ನೀಡಿದ್ದರು. ಆದರೆ ಯುವಕ ತನ್ನ ಚಾಳಿಯನ್ನು ಮುಂದುವರಿಸಿಕೊಂಡು ಬಂದಿದ್ದ. ಈ ಹಿನ್ನಲೆಯಲ್ಲಿ ಯುವತಿಯ ಪೋಷಕರು ಇಂದು ಸೋಮಪ್ಪ ನವರ ಮನೆ ಮೇಲೆ ದಾಳಿ ಮಾಡಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ.

ಸ್ಥಳಕ್ಕೆ ತಾಳಿಕೋಟೆ ಠಾಣಾ ಪೊಲೀಸರು ಆಗಮಿಸಿದ್ದು, 2 ಗುಂಪುಗಳನ್ನು ಕರೆದು ಶಾಂತಿ ಸಭೆ ನಡೆಸಲು ತೀರ್ಮಾನ ನಡೆಸುತ್ತಿದೆ.

Write A Comment