ಕರ್ನಾಟಕ

ಕ್ಷುಲ್ಲಕ ಕಾರಣಕ್ಕೆ ಬೆಂಗಳೂರಿನಲ್ಲಿ ಯುವಕನ ಹತ್ಯೆ

Pinterest LinkedIn Tumblr

22222

ಬೆಂಗಳೂರು: ಕ್ಷುಲಕ ಕಾರಣಕ್ಕೆ ಯುವಕನೊರ್ವನ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಿನ್ನೆ ತಡರಾತ್ರಿ ಬೆಂಗಳೂರಿನಲ್ಲಿ ನಡೆದಿದೆ.

ನಗರದ ಬಾಣಸವಾಡಿಯ ಪೊಲೀಸ್ ಠಾಣಾ ವ್ಯಾಪ್ತಿಯ ಆರ್ ಎಸ್ ಪಾಳ್ಯದಲ್ಲಿ ಈ ಘಟನೆ ನಡೆದಿದ್ದು, 19 ವರ್ಷದ ಯುವಕ ಸ್ಯಾಮ್ಸನ್ ಭರತ್ ಹತ್ಯೆಯಾಗಿದ್ದಾನೆ.

ನಿನ್ನೆ ರಾತ್ರಿ 9 ಗಂಟೆಯ ವೇಳೆ ಸ್ಯಾಮ್ಸನ್ ಸ್ನೇಹಿತರೊಂದಿಗೆ ಕಾಳಮ್ಮ ರಸ್ತೆಯಲ್ಲಿ ನಿಂತಿದ್ದ ವೇಳೆ ಸ್ಥಳೀಯ ನಿವಾಸಿ ಪ್ರಕಾಶ್ ಜೊತೆ ಕ್ಷುಲಕಕಾರಣಕ್ಕೆ ಜಗಳವಾಗಿದೆ. ಆ ಜಗಳ ವಿಕೋಪಕ್ಕೆ ತಿರುಗಿದ ಪರಿಣಾಮ ಪ್ರಕಾಶ್ ಸ್ಯಾಮ್ಸನ್‍ಗೆ ಚಾಕುವಿನಿಂದ ಎದೆ ಭಾಗಕ್ಕೆ ಇರಿದು ಪರಾರಿಯಾಗಿದ್ದಾನೆ. ಇತ್ತ ಸ್ಯಾಮ್ಸನ್‍ಗೆ ತೀವ್ರ ರಕ್ತಸ್ರಾವವಾಗಿದ್ದರಿಂದ ಆಸ್ಪತ್ರೆ ಸಾಗಿಸುವ ಮಧ್ಯದಲ್ಲೇ ಅಸುನಿಗಿದ್ದಾನೆ.

ಮೃತ ಸ್ಯಾಮ್ಸನ್ ಕಲ್ಯಾಣ ನಗರದ ಇಂಡೋ ಏಷಿಯಾ ಆಕಾಡಮಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಈ ಸಂಬಂಧ ಬಾಣಸವಾಡಿಯಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪ್ರಕಾಶ್‍ಗಾಗಿ ಬಲೆ ಬೀಸಿದ್ದಾರೆ.

Write A Comment