ರಾಷ್ಟ್ರೀಯ

ಕನಯ್ಯಾ ನಾಲಗೆ ಕತ್ತರಿಸಿದವರಿಗೆ ರು. 5 ಲಕ್ಷ ಬಹುಮಾನ: ಯುವ ಮೋರ್ಚಾ ಮುಖಂಡ ಘೋಷಣೆ

Pinterest LinkedIn Tumblr

kanhaiya-kumar-jnu

ಬದಾವೂ (ಉತ್ತರಪ್ರದೇಶ): ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನಯ್ಯಾ ಕುಮಾರ್‌ನ ನಾಲಗೆ ಕತ್ತರಿಸಿದವರಿಗೆ ರು. 5 ಲಕ್ಷ ಬಹುಮಾನವಾಗಿ ನೀಡುತ್ತೇನೆ ಎಂದು ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ನಾಯಕ ಘೋಷಿಸಿದ್ದಾರೆ.

ಬದಾವೂ ಜಿಲ್ಲೆಯ ಬಿಜೆವೈಎಂ ಜಿಲ್ಲಾ ಅಧ್ಯಕ್ಷ ಕುಲ್‌ದೀಪ್ ವರ್ಶ್ನೆ ಎಂಬಾತ ಇದೀಗ ಈ ರೀತಿ ಘೋಷಣೆ ಮಾಡಿ ವಿವಾದ ಸೃಷ್ಟಿಸಿದ್ದಾರೆ.

ದೇಶದ್ರೋಹದ ಆರೋಪದಲ್ಲಿ ಫೆ. 12 ರಂದು ಕನಯ್ಯಾ ಅವರನ್ನು ಬಂಧಿಸಲಾಗಿತ್ತು. ಮಾರ್ಚ್ 3 ಕ್ಕೆ ದೆಹಲಿ ಹೈಕೋರ್ಟ್ ಆತನಿಗೆ ಷರತ್ತುಬದ್ಧ ಜಾಮೀನು ನೀಡಿ ಮಾರ್ಚ್ 3 ಕ್ಕೆ ಬಿಡುಗಡೆ ಮಾಡಿತ್ತು.

ದೇಶದ್ರೋಹಿ ಘೋಷಣೆಗಳನ್ನು ಕೂಗಿದ ನಂತರ ಕನಯ್ಯಾ ಈಗ ಎಲ್ಲರನ್ನೂ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬುದು ವರ್ಶ್ನೆ ಆರೋಪ.

ವರ್ಶ್ನೆ ಉಚ್ಛಾಟನೆ: ಈ ರೀತಿ ಬಹುಮಾನ ಘೋಷಿಸಿ ವಿವಾದ ಸೃಷ್ಟಿಸಿದ ವರ್ಶ್ನೆ ಅವರನ್ನು ಬಿಜೆಪಿಯಿಂದ 6 ವರ್ಷಗಳ ಕಾಲ ವಜಾ ಮಾಡಲಾಗಿದೆ ಎಂದು ಬಲ್ಲಮೂಲಗಳು ಹೇಳಿವೆ.

Write A Comment