ಕರ್ನಾಟಕ

ಕುಖ್ಯಾತ ರೌಡಿ ಶೀಟರ್ ಅಭಿಷೇಕ್​ ಬಂಧನ

Pinterest LinkedIn Tumblr

arrestಮೈಸೂರು: ನಗರದ ವಿವಿಧ ಠಾಣೆಗಳಲ್ಲಿ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿ ಅಭಿಷೇಕ್​ ನನ್ನು ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಮಾರಕಾಸ್ತ್ರ ಹಿಡಿದು ದೊಂಬಿ, ಕೊಲೆ ಯತ್ನ, ಕೊಲೆ ಬೆದರಿಕೆ, ಹಲ್ಲೆ ಹಾಗೂ ರೋಲ್ ಕಾಲ್ ಮುಂತಾದ ಕೃತ್ಯಗಳಲ್ಲಿ ರೌಡಿ ಅಭಿಷೇಕ ಭಾಗಿಯಾಗಿದ್ದು, ಕೃಷ್ಣರಾಜ, ಲಕ್ಷ್ಮೀಪುರಂ, ದೇವರಾಜ ಠಾಣೆಗಳಲ್ಲಿ ವಿವಿಧ ಪ್ರಕರಣಗಳಲ್ಲಿ ಈತನ ಮೇಲೆ ಕೇಸ್ ದಾಖಲಾಗಿದ್ದವು.

ಸದ್ಯ ಅಭಿಷೇಕನನ್ನು ಗೂಂಡಾ ಕಾಯಿದೆಯಡಿ ನಗರ ಪೊಲೀಸರು ಬಂಧಿಸಿದ್ದು, ಬಳ್ಳಾರಿ ಜೈಲಿಗೆ ಈತನನ್ನು ರವಾನೆ ಮಾಡಲಾಗಿದೆ. ಇನ್ನು ಕೆಲವು ರೌಡಿ ಶೀಟರ್ ಗಳ ಹೆಸರನ್ನು ಪಟ್ಟಿ ಮಾಡಿದ್ದು ನಗರದಲ್ಲಿ ಶಾಂತಿ ಭಂಗ ಮಾಡಿದರೆ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದು ನಗರ ಪೊಲೀಸ್​ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

Write A Comment