ರಾಷ್ಟ್ರೀಯ

ಒಡಿಶಾ ದಡಕ್ಕೆ ತೇಲಿ ಬಂದ 33 ಅಡಿ ಉದ್ದದ ತಿಮಿಂಗಿಲ

Pinterest LinkedIn Tumblr

sperm-whale_webಬೆರ್ಹಾಂಪುರ: ಸುಮಾರು 33 ಅಡಿ ಉದ್ದದ ಭಾರಿ ಸ್ಪೆರ್ಮ್ ತಿಮಿಂಗಿಲವೊಂದು ಸತ್ತ ಸ್ಥಿತಿಯಲ್ಲಿ ಓಡಿಶಾದ ಗಂಜಾಂ ಕರಾವಳಿಯಲ್ಲಿನ ಬೆರ್ಹಾಂಪುರ ನಗರದಿಂದ 50 ಕಿಮೀ ದೂರದ ಪೊದಂಪೇಟ ಕಡಲ ತೀರಕ್ಕೆ ಬಂದು ಬಿದ್ದಿದೆ.

ಇದೇ ಮಾದರಿಯಲ್ಲಿ ಎರಡು ದಿನಗಳ ಹಿಂದೆ ಮುಂಬೈನ ಕಡಲ ತೀರದಲ್ಲಿ ಸತ್ತ ತಿಮಿಂಗಿಲ ಪತ್ತೆಯಾಗಿತ್ತು. ತಿಮಿಂಗಿಲದ ಸಾವಿನ ಕಾರಣ ತಿಳಿದಿಲ್ಲ, ಎರಡು ದಿನಗಳ ಹಿಂದೆ ಮೃತಪಟ್ಟಿರುವ ಶಂಕೆಯಿದೆ ಎಂದು ವಲಯ ಅರಣ್ಯಾಧಿಕಾರಿ ಎ. ಕೆ. ಬೆಹೆರಾ ತಿಳಿಸಿದರು.

ಮೀನುಗಾರಿಕಾ ದೋಣಿ ತಾಗಿದ ಪರಿಣಾಮವಾಗಿ ತಿಮಿಂಗಿಲ ಸತ್ತಿರಬಹುದೆಂಬ ಶಂಕೆಯನ್ನು ಬೆರ್ಹಾಂಪುರ ವಿಶ್ವವಿದ್ಯಾಲಯ ಸಾಗರ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಕೆ. ಸಿ. ಸಾಹು ವ್ಯಕ್ತಪಡಿಸಿದ್ದಾರೆ. ಸ್ಪೆರ್ಮ್ ತಿಮಿಂಗಿಲ ಸಮುದ್ರದ ಅತಿದೊಡ್ಡ ಜೀವಿಗಳಲ್ಲಿ ಒಂದಾಗಿದ್ದು, ಸಾಗರದಲ್ಲಿ 2250 ಮೀಟರ್ ಆಳದವರೆಗೆ ಇಳಿಯಬಲ್ಲುದು.

Write A Comment