ಕರ್ನಾಟಕ

4 ದಿನದಲ್ಲಿ ಲವ್, 2 ದಿನಕ್ಕೆ ಮದುವೆ, ರೈಲ್ವೇ ಸ್ಟೇಷನ್‍ನಲ್ಲಿ ಗುಡ್‍ಬೈ

Pinterest LinkedIn Tumblr

rape

ಧಾರವಾಡ: ಮನೆಯಲ್ಲಿ ತಂದೆ ತಾಯಿ ಜಗಳ ನೋಡಿ ನೋಡಿ ಬೇಸತ್ತ ಬಾಲಕಿಯೊಬ್ಬಳು, ಮನೆ ಬಿಟ್ಟು ದುಡಿಯೋಕೆ ಬಂದಿದ್ದಳು. ಅಲ್ಲಿ ಆಕೆಗೆ ಒಬ್ಬ ಯುವಕ ಸಿಕ್ಕಿದ್ದ. 4 ದಿನಕ್ಕೆ ಪ್ರೀತಿಯಾದ ಇವರಿಗೆ, ಮದುವೆನೂ ಆಯ್ತು. ಆದರೆ ಆ ಯುವಕ ಆಕೆಯನ್ನು ಹನಿಮೂನ್‍ಗೆ ಕರೆದುಕೊಂಡು ಹೋಗುವುದಾಗಿ ಹೇಳಿ, ರೈಲು ನಿಲ್ದಾಣದಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದಾನೆ.

ವಿಜಯಪುರಜಿಲ್ಲೆಯ ಸಿಂಧಗಿ ತಾಲೂಕಿನ ಹಾಸಂಗಿಹಾಳ ಗ್ರಾಮದ ಬಾಲಕಿಯೊಬ್ಬಳು, ಮನೆಯಲ್ಲಿ ಪ್ರತಿದಿನವೂ ತಂದೆ ತಾಯಿ ಜಗಳ ಮಾಡುವುದನ್ನು ನೋಡಿ, ತನ್ನ ವಿದ್ಯಾಭ್ಯಾಸ ಬಿಟ್ಟು ವಿಜಯಪುರದ ಕಟ್ಟಡ ಕಾಮಗಾರಿ ಕೆಲಸಕ್ಕೆ ಬಂದಿದ್ದಳು. ಅಲ್ಲಿ ಆಕೆಗೆ ಒಬ್ಬ ಯುವಕನ ಪರಿಚಯವಾಗಿ ಮದುವೆ ಮಾಡಿಕೊಂಡಿದ್ದಾಳೆ. ಆದರೆ ಮದುವೆಯಾದ ಆತ ಬಿಜಾಪುರ ರೈಲ್ವೆ ನಿಲ್ದಾಣದಲ್ಲಿ ಈಕೆಯನ್ನು ಬಿಟ್ಟು ಪರಾರಿಯಾಗಿದ್ದಾನೆ.

ಯುವಕ ಕೈಕೊಟ್ಟು ಹೋದ ಮೇಲೆ, ಬಾಲಕಿ ರೈಲು ಹತ್ತಿ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಬಂದಿಳಿದು ಮುಂದೇನು ಎನ್ನುವುದು ತಿಳಿಯದೇ ಕಣ್ಣೀರು ಹಾಕುತ್ತಿರುವುದನ್ನು ನೋಡಿದ ಪೊಲೀಸರು ಈಕೆಯನ್ನು ಧಾರವಾಡ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ.

ಏನಿದು ಘಟನೆ?: ಆಶ್ಚರ್ಯವಾದ್ರೂ ನಿಜ ಈ ಬಾಲಕಿಮತ್ತು ಯುವಕನ ನಡುವೆ 4 ದಿನಗಳ ಹಿಂದೆ ಪರಿಚಯವಾಗಿದೆ. ಈ ವೇಳೆ ಇವರಿಬ್ಬರ ನಡುವೆ ಪ್ರೀತಿ ಬೆಳೆದು, ಕಳೆದ ಎರಡು ದಿನಗಳ ಹಿಂದೆಯಷ್ಟೇ ಬಾಲಕಿ ಜೊತೆ ಯುವಕ ಮದುವೆ ಮಾಡಿಕೊಂಡಿದ್ದಾನೆ. ಮದುವೆಯಾದ ಮುರುದಿನ ದಿನ ಅಂದರೆ ನಿನ್ನೆ ಈಕೆಯನ್ನು ಹನಿಮೂನ್‍ಗೆ ಕರೆದುಕೊಂಡು ಹೋಗುವುದಾಗಿ ಹೇಳಿ, ವಿಜಯಪುರ ರೈಲು ನಿಲ್ದಾಣಕ್ಕೆ ಕರೆದುಕೊಂಡು ಬಂದು, ಆಕೆಯನ್ನು ರೈಲು ನಿಲ್ದಾಣದಲ್ಲೇ ಬಿಟ್ಟು ಹೋಗಿದ್ದಾನೆ.

ಸದ್ಯ ಧಾರವಾಡದ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಈಕೆಯ ಪತಿಯ ವಿಳಾಸವನ್ನು ಪತ್ತೆ ಹಚ್ಚುವ ಪ್ರಯತ್ನದಲ್ಲಿದ್ದಾರೆ. ಅಲ್ಲದೇ ಬಾಲಕಿ ಎಸ್‍ಎಸ್‍ಎಲ್‍ಸಿ ಓದುತ್ತಿದ್ದರಿಂದ ಅಧಿಕಾರಿಗಳು ಈಕೆಗೆ ಪರೀಕ್ಷೆಯನ್ನು ಬರೆಸಬಹುದೇ ಎನ್ನುವ ಚಿಂತನೆ ಮಾಡಿದ್ದಾರೆ. ಜೊತೆಗೆ ಈಕೆಯ ಬಗ್ಗೆ ಎಲ್ಲ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.

Write A Comment