ಅಂತರಾಷ್ಟ್ರೀಯ

ಆಡೋ ಕಾರಲ್ಲಿ ಓಡೋಗಲು ಹೋಗಿ ಸಿಕ್ಕಿಬಿದ್ದ ಕ್ರೆಡಿಟ್ ಕಾರ್ಡ್ ಕಳ್ಳ

Pinterest LinkedIn Tumblr

devid

ವಾಷಿಂಗ್ಟನ್: ಕ್ರೆಡಿಟ್ ಕಾರ್ಡ್ ಕದ್ದು ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ ಕಳ್ಳನೊಬ್ಬ ಮಕ್ಕಳ ಆಟಿಕೆಯ ಕಾರಿನಲ್ಲಿ ಹೋಗುವಾಗ ಪೊಲೀಸರ ಕೈಗೆ ಸಿಕಿಬಿದ್ದಿರುವ ಘಟನೆ ಅಮೆರಿಕದ ಟೆಕ್ಸಾಸ್‍ನ ಸ್ಯಾನ್ ಜಸಿಂಟೋ ಕೌಂಟಿ ಎಂಬಲ್ಲಿ ನಡೆದಿದೆ.

5ರಿಂದ 10 ವರ್ಷದ ಮಕ್ಕಳಿಗಾಗಿ ಇರುವ ಗುಲಾಬಿ ಬಣ್ಣದ ಎಲೆಕ್ಟ್ರಿಕ್ ಕಾರ್‍ವೊಂದರಲ್ಲಿ ಡೇವಿಡ್ ಓಡಾಡುವುದು ಈ ನಗರದಲ್ಲಿ ಸಾಮಾನ್ಯವಾಗಿತ್ತು. ಮಕ್ಕಳ ಕಾರ್ ಓಡುಸುತ್ತಾ ಡೇವಿಡ್ ರಸ್ತೆಯಲ್ಲೆಲ್ಲಾದರೂ ಕಂಡಾಗೆಲ್ಲಾ ಸ್ಥಳೀಯರು ಈತನ ಬಗ್ಗೆ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದರು.

ಅಲ್ಲದೆ ಡೇವಿಡ್ ಇದೇ ಏರಿಯಾದಲ್ಲಿ ಮಹಿಳೆಯೊಬ್ಬರ ಕ್ರೆಡಿಟ್ ಕಾರ್ಡ್ ಕದ್ದು ರಾಜಾರೋಶವಾಗಿ ಓಡಾಡುತ್ತಿದ್ದ. ಈ ಕಳ್ಳನಿಗಾಗಿ ಬಲೆ ಬೀಸಿದ್ದ ಪೋಲೀಸರು ಕೊನೆಗೂ ಕಾರ್ ಸಮೇತ ಈತನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈತನನ್ನು ಬಂಧಿಸೋ ಸಂದರ್ಭದಲ್ಲಿ ಅದೇ ಮಾರ್ಗವಾಗಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಈ ಘಟನೆ ನಡೆದಿದ್ದು ಸತ್ಯ ಅಂತ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ ಬಂಧಿತನಾಗೋ ಸಂದರ್ಭದಲ್ಲಿ ಈತ ಕಾರಿಗೆ ಬ್ಯಾಟರಿ ತರಲು ಹೋಗುತ್ತಿದ್ದ. ಸದ್ಯ ಅದನ್ನ ತಳ್ಳಿಕೊಂಡು ಹೋಗಲಿಲ್ಲವಲ್ಲ ಅಂತ ಇಲ್ಲಿನ ಪೊಲೀಸ್ ಲೆಫ್ಟಿನೆಂಟ್ ಲಾರೆನ್ಸ್ ಹೇಳಿದ್ದಾರೆ.

Write A Comment