ಅಂತರಾಷ್ಟ್ರೀಯ

ಬಾಲ ತುಳಿದ ಬಾಲಕಿ ಮೇಲೆ ಬೆಕ್ಕು ಸೇಡು ತೀರಿಸಿದ್ದನ್ನು ನೋಡಿ

Pinterest LinkedIn Tumblr

https://youtu.be/YKABiEvI_T4

ಐಲ್ಯಾಟ್: ಹಾವಿನ ದ್ವೇಷ 12 ವರುಷ ಎನ್ನುವ ಮಾತಿದೆ. ಹಾಗಂತ ಬೆಕ್ಕು 12 ವರ್ಷ ಕಾಯುತ್ತೆ ಅಂದಕೊಂಡ್ರಾ. ಇಲ್ಲ ಸ್ವಾಮಿ ತನಗೆ ನೋವುಂಟು ಮಾಡಿದ ಪುಟ್ಟ ಬಾಲಕಿಗೆ ಕ್ಷಣ ಮಾತ್ರದಲ್ಲೇ ಬೆಕ್ಕೊಂದು ಬುದ್ಧಿ ಕಲಿಸಿದೆ.

ಹೌದು. ಬೆಕ್ಕಿನ ಜೊತೆ ಚೆಲ್ಲಾಟಕ್ಕೆ ಮುಂದಾದ್ರೆ ಹೀಗೂ ಆಗುತ್ತೆ ಎನ್ನುವುದಕ್ಕೆ ಇಲ್ಲೊಂದು ಘಟನೆ ಉತ್ತಮ ನಿರ್ದಶನವಾಗಿದೆ. ಇಸ್ರೇಲ್ ಐಲ್ಯಾಟ್ ಪಾರ್ಕ್‍ನಲ್ಲಿ ಸುಮ್ಮನೆ ಮಲಗಿದ್ದ ಬೆಕ್ಕಿನ ಜೊತೆ ತುಂಟಾಟ ಪ್ರದರ್ಶಿಸಲು ಹೋದ ಪುಟ್ಟ ಕಂದಮ್ಮ ಬಿದ್ದು ಪೆಟ್ಟು ಮಾಡಿಕೊಂಡಿದ್ದಾಳೆ.

ಪಾರ್ಕ್‍ನಲ್ಲಿ ಆಟವಾಡುತ್ತಿದ್ದ ಬಾಲಕಿ ಅಲ್ಲೇ ಮಲಗಿದ್ದ ಬೆಕ್ಕಿನ ಬಾಲವನ್ನು ತುಳಿದಿದ್ದಾಳೆ. ಇದರಿಂದ ಕೋಪಗೊಂಡ ಬೆಕ್ಕು ಆಕೆಯನ್ನು ಓಡಿಸಿಕೊಂಡು ಹೋಗಿದೆ. ಇದರಿಂದ ಹೆದರಿದ ಬಾಲಕಿ ಅಲ್ಲಿಂದ ಕಾಲ್ಕಿತ್ತಿದ್ದಾಳೆ. ಹೀಗೆ ಓಡಬೇಕಾದರೆ ನಿಯಂತ್ರಣ ತಪ್ಪಿ ಕಟ್ಟೆಯಿಂದ ಬಿದ್ದಿದ್ದಾಳೆ. ಇದ್ರಿಂದ ಯಾರಿಗೆ ಖುಷಿಯಾಗಿರುತ್ತೋ ಇಲ್ವೋ ಗೊತ್ತಿಲ್ಲಾ ಬೆಕ್ಕಿಗಂತೂ ಹಾಲು ಕುಡಿದಷ್ಟೂ ಸಂತೋಷವಾಗಿರುತ್ತೆ ಬಿಡಿ.

Write A Comment