ಅಂತರಾಷ್ಟ್ರೀಯ

ಈ ಸುದ್ದಿ ಓದಿದ್ರೆ ಈ ವ್ಯಕ್ತಿಯ ಸೈಕಲ್ ಪ್ರೀತಿ ನಿಮಗೆ ಗೊತ್ತಾಗುತ್ತೆ!

Pinterest LinkedIn Tumblr

cycle

ಲಂಡನ್: ಇಂಗ್ಲೆಂಡಿನ ಹೆನ್ರಿ ಸೌಟ್ಟರ್ ಎಂಬ 65 ವರ್ಷದ ವ್ಯಕ್ತಿ 50 ವರ್ಷಗಳ ಹಿಂದೇ ತಾವೇ ಸ್ವಂತವಾಗಿ ನಿರ್ಮಿಸಿದ್ದ ಸೈಕಲಿಗೆ ಮರುಜೀವ ನಿಡಿ ಈಗಲೂ ಅದನ್ನ ಬಳಸ್ತಿದ್ದಾರೆ.

ಇವರು 1965ರಲ್ಲಿ 14ನೇ ವಯಸ್ಸಿನಲ್ಲಿದ್ದಾಗ ಬೇರೆ ಬೇರೆ ಸೈಕಲ್ಲಿನ ಬಿಡಿ ಭಾಗಗಳನ್ನ ಬಳಸಿ 4 ಸ್ಪೀಡ್ ಗೇರ್‍ಗಳ ಸೈಕಲನ್ನ ವಿನ್ಯಾಸಗೊಳಿಸಿದ್ದರು. ಆಗಿನ ಕಾಲದಲ್ಲಿ ಶಾಲೆಗೆ ಹೋಗುವ ಹುಡುಗನೊಬ್ಬ ಸೈಕಲ್ ತಯಾರಿಸಿದ್ದಾನಲ್ಲ ಅಂತ ಲಂಡನ್ನಿನ ದಿನಪತ್ರಿಕೆಯಲ್ಲೂ ಇವರ ಬಗ್ಗೆ ಸುದ್ದಿಯಾಗಿತ್ತು.

ಆದರೆ ಅದಾಗಿ ಈಗ 50 ವರ್ಷಗಳಾಗಿದ್ದು ಸೈಕಲ್‍ನ ಹೊರಭಾಗವೆಲ್ಲಾ ತುಕ್ಕು ಹಿಡಿದಿತ್ತು. ತಾವೇ ನಿರ್ಮಿಸಿದ ಸೈಕಲ್ ಎಂಬ ಕಾರಣಕ್ಕೆ ಅದರ ಮೇಲೆ ತುಂಬಾ ಅಟ್ಯಾಚ್‍ಮೆಂಟ್ ಇದ್ದಿದ್ದರಿಂದ ಆ ಸೈಕಲನ್ನ ಹೆನ್ರಿ ಮರುನಿರ್ಮಾಣ ಮಾಡಿದ್ದಾರೆ. ಈಗ ಇವರ ಸೈಕಲ್ 50 ವರ್ಷಗಳ ಹಿಂದೆ ಹೇಗಿತ್ತೋ ಅದೇ ರೀತಿ ಹೊಸದರಂತೆ ಹೊಳೆಯುತ್ತಿದೆ.

ಹೆನ್ರಿ ಈ ಸೈಕಲ್ ಏರಿ ಸವಾರಿ ಹೊರಟು ದಿನಪತ್ರಿಕೆಯಲ್ಲಿ ಬಂದಿದ್ದ ಫೋಟೋದಂತೆ ಲಂಡನ್ನಿನ ಅದೇ ಜಾಗದಲ್ಲಿ ಅದೇ ರೀತಿ ಪೋಸ್ ನೀಡಿ ಫೋಟೋ ಕೂಡ ತೆಗೆಸಿಕೊಂಡಿದ್ದಾರೆ.

Write A Comment