ರಾಷ್ಟ್ರೀಯ

ಮೋದಿ ಸರ್ಕಾರ ಕಪ್ಪು ಹಣ ಬಿಳಿ ಮಾಡಲು ಫೇರ್ ಅಂಡ್ ಲವ್ಲಿ ಯೋಜನೆ ಜಾರಿಗೆ ತಂದಿದೆ: ರಾಹುಲ್ ಗಾಂಧಿ ವ್ಯಂಗ್ಯ

Pinterest LinkedIn Tumblr

rahul-gandhi

ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಕಪ್ಪು ಹಣವನ್ನು ಬಿಳಿ ಮಾಡಲು ಫೇರ್ ಆಂಡ್ ಲವ್ಲಿ ಯೋಜನೆ ಜಾರಿಗೆ ತಂದಿದೆ ಎಂದು ಬುಧವಾರ ಆರೋಪಿಸಿದ್ದಾರೆ.

ಇಂದು ಲೋಕಸಭೆಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಭಾಷಣದ ಮೇಲಿನ ಚರ್ಚೆಯ ವೇಳೆ ಮಾತನಾಡಿದ ರಾಹುಲ್ ಗಾಂಧಿ, ಅಧಿಕಾರಕ್ಕೆ ಏರುವ ಮುನ್ನ ಮೋದಿ ಸರ್ಕಾರ ಹಲವು ಭರವಸೆಗಳನ್ನು ನೀಡಿತ್ತು. ಅದರಲ್ಲಿ ವಿದೇಶದಿಂದ ಕಪ್ಪು ಹಣ ವಾಪಸ್ ತರುವುದು ಕೂಡಾ ಒಂದು. ಆದರೆ ಈವರೆಗೂ ಕಪ್ಪು ಹಣ ವಾಪಸ್ ಬಂದಿಲ್ಲ, ಈಗ ಕಪ್ಪು ಹಣವನ್ನು ಬಿಳಿ ಮಾಡಲು ಫೇರ್ ಅಂಡ್ ಲವ್ಲಿ ಯೋಜನೆಯನ್ನು ಜಾರಿಗೆ ತಂದಿದೆ ಎಂದರು.

ನರೇಗಾ ಸಾರ್ವಕರ್ ಯೋಜನೆಯಲ್ಲ, ಅದು ಮಹಾತ್ಮಾಗಾಂಧಿ ಯೋಜನೆಯಾಗಿದೆ. ದೇಶದಲ್ಲಿ ಶಿಕ್ಷಕರ ಮೇಲೆ, ಪತ್ರಕರ್ತರ ಮೇಲೆ, ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಾಗ ಪ್ರಧಾನಿ ಮೋದಿ ಒಂದೇ ಒಂದು ಮಾತು ಆಡಿಲ್ಲ ಎಂದು ರಾಹುಲ್ ಗಾಂಧಿ ದೂರಿದರು.

ಇದೇ ವೇಳೆ ಮುಂಬೈ ದಾಳಿಯ ಬಳಿಕ ಪಾಕಿಸ್ತಾನವನ್ನು ನಾವು ಸಣ್ಣ ಗೂಡಿನೊಳಗೆ ಇಟ್ಟಿದ್ದೆವು. ಪ್ರಧಾನಿಯವರು ಪಾಕ್ ಪ್ರಧಾನಿ ಜೊತೆಗೆ ಚಹಾ ಕುಡಿಯುವ ಮೂಲಕ ನಮ್ಮ 6 ವರ್ಷಗಳ ಕೆಲಸವನ್ನು ಏಕಾಂಗಿಯಾಗಿ ನಾಶ ಪಡಿಸಿದರು ಎಂದು ರಾಹುಲ್ ಆರೋಪಿಸಿದರು.

Write A Comment