ಕರ್ನಾಟಕ

‘ಶ್ರೀ ಸತ್ಯನಾರಾಯಣ’ ಸಿನೆಮಾದಲ್ಲಿ ಸಿನೆಮಾದಲ್ಲಿ 16 ಪಾತ್ರಗಳಲ್ಲಿ ಹರೀಶ್ ರಾಜ್

Pinterest LinkedIn Tumblr

harish-raj-2

ಬೆಂಗಳೂರು: ಸಿನೆಮಾದಲ್ಲಿ ನಟನೊಬ್ಬ ಒಂದಕ್ಕಿಂತಲೂ ಹೆಚ್ಚಾಗಿ ದ್ವಿಪಾತ್ರ, ಮೂರೂ ಪಾತ್ರಗಳಲ್ಲಿ ನಟಿಸುವುದನ್ನು ನಾವು ವಿರಳವಾಗಿ ಕಾಣಬಹುದಾಗಿದ್ದರೂ, ಒಬ್ಬನೇ ನಟ, ಒಂದೇ ಸಿನೆಮಾದಲ್ಲಿ ೧೬ ಪಾತ್ರಗಳಲ್ಲಿ ನಟಿಸುವುದೆಂದರೆ? ಹೌದು ನಟ ಹರೀಶ್ ರಾಜ್ ಇಂತಹುದೊಂದು ಸಾಹಸಕ್ಕೆ ಕೈಹಾಕಿದ್ದಾರೆ.

ತಮ್ಮದೇ ನಿರ್ಮಾಣ ಸಂಸ್ಥೆಯಲ್ಲಿ ಹರೀಶ್ ರಾಜ್ ಅವರೇ ನಿರ್ದೇಶಿಸುತ್ತಿರುವ ‘ಶ್ರೀ ಸತ್ಯನಾರಾಯಣ’ ಸಿನೆಮಾದಲ್ಲಿ ಹರೀಶ್ ೧೬ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ನಾಯಕ ನಟ, ತುಂಗಧ್ವಜ ರಾಜ, ಕೋಪಗೊಂಡ ಋಷಿ ವೇಷದಲ್ಲಿರುವ ನಾರಾಯಣ, ರಾಜ ಚಂದ್ರಕೇತು, ದರೋಡೆಕಾರ, ಸುಂದರ ಯುವಕ, ಬಡ ಬ್ರಾಹ್ಮಣ, ಮುದುಕನ ವೇಷದಲ್ಲಿರುವ ನಾರಾಯಣ, ಮರ ಕಡಿಯುವವ, ರಾಜ ಉಲ್ಕಮುಖ, ವ್ಯಾಪಾರಿ, ನಾರದ ಮಹರ್ಷಿ, ನಾರಾಯಣ, ಸುತ ಮಹಾಮುನಿ, ಶೌನಕ ಮಹರ್ಷಿ, ವ್ಯಾಸ ಮಹಾಮುನಿ ಪಾತ್ರಗಳಲ್ಲಿ ಹರೀಶ್ ರಾಜ್ ಕಾಣಿಸಿಕೊಳ್ಳಲಿದ್ದಾರೆ.

Write A Comment