ರಾಷ್ಟ್ರೀಯ

ಕದನ ವಿರಾಮ ಒಪ್ಪಂದಕ್ಕೆ ಬದ್ಧರಾಗಿರಿ: ಪಾಕ್ ಗೆ ಭಾರತ ತಾಕೀತು

Pinterest LinkedIn Tumblr

ind-pak

ನವದೆಹಲಿ: 2003ರ ಕದನ ವಿರಾಮ ಒಪ್ಪಂದಕ್ಕೆ ಬದ್ಧರಾಗಿರಿ ಎಂದು ಭಾರತ ಪಾಕಿಸ್ತಾನಕ್ಕೆ ಎಚ್ಚರಿಸಿದೆ.

ಕದನ ವಿರಾಮ ಒಪ್ಪಂದ ಉಲ್ಲಂಘನೆ ಮಾಡಿ, ಗಡಿ ನಿಯಂತ್ರಣ ರೇಖೆ ದಾಟಿ ಭಾರತ ಎಂದಿಗೂ ಹೋಗಿಲ್ಲ. ಆದರೆ ಪಾಕಿಸ್ತಾನ ಮಾತ್ರ ಪದೇ ಪದೇ ಕದನ ವಿರಾಮ ಒಪ್ಪಂದ ಉಲ್ಲಂಘನೆ ಮಾಡಿ ಭಾರತದ ಮೇಲೆ ದಾಳಿ ನಡೆಸುತ್ತಾ ಬರುತ್ತಿದೆ ಎಂದು ಗೃಹ ಇಲಾಖೆಯ ರಾಜ್ಯ ಸಚಿವ ಹರಿಬಾಯ್‌ ಚೌಧರಿ ಹೇಳಿದ್ದಾರೆ.

ಪಾಕಿಸ್ತಾನ 2015ರಲ್ಲಿ 253 ಬಾರಿ, 2014ರಲ್ಲಿ 430 ಹಾಗೂ 2013ರಲ್ಲಿ 148 ಬಾರಿ ಕದನ ವಿರಾಮ ಒಪ್ಪಂದ ಉಲ್ಲಂಘನೆ ಮಾಡಿದೆ. ಅಷ್ಟೇ ಅಲ್ಲದೇ, 2015ರಲ್ಲಿ ಜಮ್ಮ ಮತ್ತು ಕಾಶ್ಮೀರದ ಗಡಿಯಲ್ಲಿ 121 ಬಾರಿ ಒಳನುಸುಳಲು ಯತ್ನಿಸಿದ್ದು, 33 ಪ್ರಯತ್ನ ಯಶಸ್ವಿಯಾಗಿದೆ. ಈ ವೇಳೆ 46 ಉಗ್ರರನ್ನು ಹತ್ಯೆ ಮಾಡಲಾಗಿದೆ.
ಇನ್ನು 2014ರಲ್ಲಿ 222 ಬಾರಿ ಒಳ ನುಸುಳಲು ಯತ್ನಿಸಿದ್ದು ಅದರಲ್ಲಿ 65 ಯಶಸ್ವಿಯಾಗಿದೆ. ಆ ಸಮಯದಲ್ಲಿ ಸುಮಾರು 52 ಉಗ್ರರನ್ನು ಹತ್ಯೆ ಮಾಡಲಾಗಿತ್ತು.

ಕದನ ವಿರಾಮ ಒಪ್ಪಂದ ಉಲ್ಲಂಘನೆಯಿಂದಾಗಿ ಗಡಿಯಲ್ಲಿ 222 ಭಯೋತ್ಪಾದನೆ ಘಟನೆಗಳನ್ನು ನಡೆದಿದ್ದು, 47 ಮಂದಿ ಭದ್ರತಾ ಪಡೆ ಮತ್ತು 28 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Write A Comment