ಕರ್ನಾಟಕ

ಮೈಸೂರು ಮಹಾರಾಜನಿಗೆ ಕೂಡಿಬಂತು ಕಂಕಣ ಭಾಗ್ಯ

Pinterest LinkedIn Tumblr

new-yadhu

ಮೈಸೂರು, ಫೆ.29: ಮೈಸೂರು ಸಂಸ್ಥಾನದ ಉತ್ತರಾಧಿಕಾರಿಗೆ ಕಂಕಣಬಲ ಕೂಡಿ ಬಂದಿದೆ. ಕಳೆದ ವರ್ಷವಷ್ಟೇ ಸಂಸ್ಥಾನದ ಉತ್ತರಾಧಿಕಾರಿಯಾಗಿ ದಸರೆಯಲ್ಲಿ ರತ್ನ ಖಚಿತ ಸಿಂಹಾಸನವೇರಿ ದರ್ಬಾರ್ ನಡೆಸಿದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ವಿವಾಹ ಮೇ ತಿಂಗಳಲ್ಲಿ ನಡೆಸಲು ನಿಶ್ಚಯ ಮಾಡಲಾಗಿದೆ. ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ತಮ್ಮ ಪುತ್ರನ ವಿವಾಹಕ್ಕೆ ಸಂಬಂಧಿಸಿದಂತೆ ಶೃಂಗೇರಿ ಜಗದ್ಗುರುಗಳ ಆಶೀರ್ವಾದ ಪಡೆದಿದ್ದಾರೆ. ಮೇ 8 ಮತ್ತು 18 ಈ ಎರಡು ದಿನಗಳಲ್ಲಿ ಒಂದು ದಿನವನ್ನು ನಿಗದಿ ಮಾಡುವ ತಯಾರಿ ನಡೆದಿದೆ. ಜಗದ್ಗುರುಗಳು ಸೂಚಿಸಿದಂತೆ ವಿವಾಹ ಕಾರ್ಯಗಳು ನೆರವೇರಲಿವೆ.

ಈಗಾಗಲೇ ರಾಜಸ್ಥಾನದ ದುಂಗರ್ಪುರದ ರಾಜಮನೆತನದ ರಿಷಿಕಾ ಕುಮಾರಿ ಜೊತೆ ನಿಶ್ಚಿತಾರ್ಥ ನಡೆದಿದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷದ ದಸರಾ ದರ್ಬಾರ್‌ನಲ್ಲೂ ರಿಷಿಕಾಕುಮಾರಿ ಕಾಣಿಸಿಕೊಂಡಿದ್ದರು. ರಾಜವಂಶಸ್ಥರು ಮತ್ತುಮೈಸೂರು ಸಂಸ್ಥಾನದ ಸಂಪ್ರದಾಯದಂತೆ ವಿಶ್ವವಿಖ್ಯಾತ ಮೈಸೂರು ಅರಮನೆಯಲ್ಲಿರವ ಕಲ್ಯಾಣ ಮಂಟಪದಲ್ಲೇ ಯದುವೀರರ ವಿವಾಹ ನಡೆಸುವ ಬಗ್ಗೆ ಚಿಂತನೆಯೂ ನಡೆದಿದೆ. ಎಲ್ಲವೂ ನಿಶ್ಚಿಯದಂತೆ ಮೇ ತಿಂಗಳಲ್ಲಿ ನಡೆದರೆ ಐದು ದಿನಗಳ ಕಾಲ ಅದ್ಧೂರಿ ವಿವಾಹ ಮಹೋತ್ಸವ ನಡೆಯಲಿದ್ದು, ಅಷ್ಟೂ ದಿನ ಅರಮನೆಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗುವುದು.

Write A Comment