ಕನ್ನಡ ವಾರ್ತೆಗಳು

ದೇಶದ್ರೋಹಿಗಳೇ ದೇಶ ಬಿಟ್ಟು ತೊಲಗಿ ; ಮಂಗಳೂರಿನಲ್ಲೊಂದು ವಿಶಿಷ್ಟ ಕಾರ್ಯಕ್ರಮ

Pinterest LinkedIn Tumblr

rashtya_jagart_samiti_1

ಮಂಗಳೂರು : ರಾಷ್ಟ್ರ ಜಾಗೃತಿ ಸಮಿತಿ, ಮಂಗಳೂರು ಇವರ ಅಶ್ರಯದಲ್ಲಿ ದೇಶದ್ರೋಹಿಗಳೇ ದೇಶ ಬಿಟ್ಟು ತೊಲಗಿ ಎಂಬ ವಿಶಿಷ್ಟ ಕಾರ್ಯಕ್ರಮ ಸೋಮವಾರ ನಗರದ ಪುರಭವನದಲ್ಲಿ ಜರಗಿತು.

ಕಾರ್ಯಕ್ರಮದಲ್ಲಿ ವಿಶೇಷ ಅಹೌನಿತರಾಗಿ ಭಾಗವಹಿಸಿದ್ದ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಮಾಧ್ಯಮ ಸಹ ಸಂಚಾಲಕಿ, ಕಳೆದ ಚುನಾವಣೆಯಲ್ಲಿ ಈಗಿನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಚುಣಾವಣೆಗೆ ಸ್ಫರ್ಧಿಸಿದ್ದ ನೂಪುರ್ ಶರ್ಮಾ ಅವರು ಮಾತನಾಡಿ, ಜೆ ಎನ್ ಯು ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶ ವಿರೋಧಿ ಹೇಳಿಕೆಗಳನ್ನು ನೀಡುತ್ತಿರುವ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ, ಸಿಪಿಐ ಮುಖಂಡ ಸೀತಾರಾಮ್ ಯೆಂಚೂರಿ ಸೇರಿದಂತೆ ವಿಪಕ್ಷಗಳ ಮುಖಂಡರು ದೇಶ ಬಿಟ್ಟು ತೊಲಗಲಿ ಎಂದು ಹೇಳಿದರು.

 

rashtya_jagart_samiti_2 rashtya_jagart_samiti_3 rashtya_jagart_samiti_4 rashtya_jagart_samiti_5 rashtya_jagart_samiti_6 rashtya_jagart_samiti_7 rashtya_jagart_samiti_8 rashtya_jagart_samiti_9 rashtya_jagart_samiti_10 rashtya_jagart_samiti_11 rashtya_jagart_samiti_12 rashtya_jagart_samiti_13 rashtya_jagart_samiti_14 rashtya_jagart_samiti_15 rashtya_jagart_samiti_16 rashtya_jagart_samiti_17 rashtya_jagart_samiti_18 rashtya_jagart_samiti_19 rashtya_jagart_samiti_20 rashtya_jagart_samiti_21 rashtya_jagart_samiti_22 rashtya_jagart_samiti_23

ಸುಮಾರು 15 ವರ್ಷಗಳಿಂದ ಇತಂಹ ಪ್ರಕರಣಗಳು ಜೆಎನ್‌ಯುನಲ್ಲಿ ನಡೆಯುತ್ತಿದ್ದರು ಈ ವರೆಗೆ ಬೆಳಕಿಗೆ ಬಂದಿರಲಿಲ್ಲ. ನೂತನ ಸರ್ಕಾರ (ಎನ್ ಡಿ ಎ) ಅಧಿಕಾರಕ್ಕೆ ಬಂದ ನಂತರ ಜೆಎನ್‌ಯುನ ಉಪಕುಲಪತಿಯವರನ್ನು ಬದಲಾಯಿಸಲಾಯಿದೆ. ಇಂತಹ ಪ್ರಕರಣಗಳು ಕೇವಲ ಜೆಎನ್‌ಯುನಲ್ಲಿ ಮಾತ್ರವಲ ದೇಶದ ಹಲವಾರು ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿದೆ ಎಂಬುವುದು ಬಹಳ ದುಃಖಕರ ಸಂಗತಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ದೇಶದ ರಕ್ಷಣೆಗಾಗಿ ತನ್ನ ಮಗಳನ್ನು ಕಳುಹಿಸುತ್ತೇನೆ ಎಂದು ಇತ್ತೀಚಿಗೆ ದೇಶದ ರಕ್ಷಣೆಯಲ್ಲಿ ಹುತಾತ್ಮರಾದ ಕೆಚ್ಚೆದೆಯ ಯೋಧ ಲ್ಯಾನ್ಸ್ ನಾಯಕ್ ಹನುಮಂತಪ್ಪರವರ ಪತ್ನಿ ಹೇಳುತ್ತಾರೆ. ಆದರೆ ರಾಹುಲ್ ಗಾಂಧಿ ಸೇರಿದಂತೆ ಕೆಲವು ಕಾಂಗ್ರೆಸ್ ಮುಖಂಡರು ನೇರವಾಗಿ ಅಥವಾ ಪರೋಕ್ಷವಾಗಿ ಭಯೋತ್ಪಾದಕತೆಯನ್ನು ಬೆಂಬಲಿಸಿ ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಇವರಿಗೆ ದೇಶದ ಸುಧಾರಣೆಗಿಂತ ಓಟ್ ಬ್ಯಾಂಕೇ ಮುಖ್ಯವಾಗಿದೆ ಎಂದು ನೂಪುರ್ ಶರ್ಮಾ ಆರೋಪಿಸಿದರು.

ವಿಶ್ವಹಿಂದೂ ಪರಿಷತ್ ಪ್ರಾಂತೀಯ ಮುಖಂಡ ಎಂ .ಬಿ ಪುರಾಣಿಕ, ನಿವೃತ್ತ ಸೈನಿಕರಾದ ಬ್ರಿಗೆಡಿಯರ್ ಐ ಎನ್ ರೈ ಮೊದಲಾದವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಇತ್ತೀಚಿಗೆ ಸಿಯಾಚಿನ್ ಹಿಮಪಾತದಿಂದಾಗಿ ಹುತಾತ್ಮರಾದ ಯೋಧ ನಾಗೇಶ್ ಅವರ ಪತ್ನಿ ಆಶಾ ಎಸ್.ಎಂ ಇವರಿಗೆ ವಿಶ್ವಹಿಂದೂ ಪರಿಷತ್ ವತಿಯಿಂದ ಪರಿಹಾರ ಚೆಕ್‌ ವಿತರಿಸಲಾಯಿತು.

ಕಾರ್ಯಕ್ರಮದ ಆರಂಭಕ್ಕೂ ಮುನ್ನ ಕೆನಾರ ಕಾಲೇಜಿನಿಂದ ಪುರಭವನದವರೆಗೆ “ದೇಶಕ್ಕಾಗಿ ನಡಿಗೆ” ಜಾಥಾ ನಡೆಯಿತು. ಮೆರವಣಿಗೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾರತದ ಏಕತೆ ಅಖಂಡತೆಗಳ ಬಗ್ಗೆ ಗೌರವವಿಲ್ಲದ್ದವವರು ದೇಶ ಬಿಟ್ಟು ತೊಲಗಿ ಎಂಬ ಘೋಷಣೆ ಕೂಗಿದರು.

ವೇದಿಕೆಯಲ್ಲಿ ವಿವಿಧ ಸಂಘಸಂಸ್ಥೆಗಳ ಮುಖಂಡರಾದ ಉಪನ್ಯಾಸಕ ಬೋಳಾ ಚಿತ್ತರಂಜನ್ ಶೆಟ್ಟಿ, ಕಿಶೋರ್ ಡಿ.ಶೆಟ್ಟಿ, ಡಾ ವೈ ಭಾರತ್ ಶೆಟ್ಟಿ, ಸುನೀಲ್ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು

 

Write A Comment