ಕರ್ನಾಟಕ

ಬೆಂಗಳೂರಿನಲ್ಲಿ ಯುವಕನಿಗೆ ಚಾಕು ಇರಿತ

Pinterest LinkedIn Tumblr

snabಬೆಂಗಳೂರು: ಇಬ್ಬರ ಜಗಳ ಬಿಡಿಸಲು ಹೋದ ಯುವಕನೋರ್ವ ಬಳಿಕ ತಾನೇ ಹತ್ಯೆಗೀಡಾದ ಭಯಾನಕ ಘಟನೆಯೊಂದು ನಗರದ ಡಿ.ಜೆ ಹಳ್ಳಿ ಪ್ರದೇಶದಲ್ಲಿ ಇಂದು ನಡೆದಿದೆ.

ಎರಡು ಗುಂಪುಗಳ ನಡುವೆ ಜಗಳ ನಡೆಯುತ್ತಿತ್ತು. ಈ ವೇಳೆ ಜಗಳ ಬಿಡಿಸಲೆಂದು ಸುಹೈಬ್ ಖಾನ್(24) ಎಂಬಾತ ಹೋಗಿದ್ದು, ಎರಡು ಗುಂಪುಗಳನ್ನು ಶಾಂತಗೊಳಿಸುವ ಪ್ರಯತ್ನ ಮಾಡಿದ್ದಾನೆ. ಆದರೆ, ಇದರಿಂದ ಆಕ್ರೋಶಗೊಂಡ ಶಾಬಾಜ್ ಖಾನ್ ಎಂಬಾತ ಡ್ರ್ಯಾಗನ್‌ನಿಂದ ಸುಹೈಬ್‌ಗೆ ಇರಿದಾಗ ಸುಹೈಬ್ ಗಂಭೀರವಾಗಿ ಗಾಯಗೊಂಡಿದ್ದಾನೆ.

ಗಂಭೀರವಾಗಿ ಗಾಯಗೊಂಡ ಸುಹೈಬ್ ಖಾನ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ

ಸುಹೈಬ್ ಮೇಲೆ ಶಾಬಾಜ್ ಖಾನ್ ಹಲ್ಲೆ ಮಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಆರೋಪಿ ಶಾಬಾಜ್ ಹಾಗೂ ಇತರರ ವಿರುದ್ಧ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ.

Write A Comment