ರಾಷ್ಟ್ರೀಯ

ದುಷ್ಕರ್ಮಿಗಳ ಗುಂಡೇಟಿಗೆ ಇಬ್ಬರು ಟೋಲ್ ಸಿಬ್ಬಂದಿ ಸಾವು

Pinterest LinkedIn Tumblr

shoot-e1456311822661ದೆಹಲಿ: ನಗರದ ಬದಲ್ ಪುರ ಟೋಲ್ ಪ್ಲಾಜಾದಲ್ಲಿ ನಡೆದ ಅಪರಿಚಿತರ ಗುಂಡಿನ ದಾಳಿಗೆ ಇಬ್ಬರು ಬಲಿಯಾದ ಘಟನೆ ಇಂದು ನಡೆದಿದೆ.

ಹಣ ಸಂಗ್ರಹಿಸಿ ಹೋಗುತ್ತಿದ್ದ ಟೋಲ್ ಸಿಬ್ಬಂದಿ ಮೇಲೆ ಪ್ರಥಮವಾಗಿ ಗುಂಡಿನ ದಾಳಿ ನಡೆಸಿದ್ದ ದುಷ್ಕರ್ಮಿಗಳು ಆತನ ಕೈಯಿಂದ 2.5 ಕೋಟಿ ದರೋಡೆ ಮಾಡಿದ್ದಾರೆ ಎನ್ನಲಾಗಿದೆ.

ಬಳಿಕ ಟೋಲ್ ನ ಸೆಕ್ಯೂರಿಟಿ ಗಾರ್ಡ್ ಹಾಗೂ ಕ್ಯಾಷಿಯರ್ ಮೇಲೆ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಇವರಿಬ್ಬರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬುವುದಾಗಿ ವರದಿಯಾಗಿದೆ.

Write A Comment