ಕರ್ನಾಟಕ

ಮನೆಗೆ ಬಂದ ಅಪ್ರಾಪ್ತೆ ಮೇಲೆ ಅತ್ಯಾಚಾರ: ಚಾಲಕನಿಗೆ 10 ವರ್ಷ ಜೈಲು ಶಿಕ್ಷೆ

Pinterest LinkedIn Tumblr

rapeಬೆಂಗಳೂರು: ಮನೆಗೆ ಬಂದಿದ್ದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲಕನೊಬ್ಬನಿಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಶನಿವಾರ 10 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಿದೆ.

2012ರ ಜುಲೈ ನಲ್ಲಿ ಬೆಂಗಳೂರಿನ ಮೈಕೋ ಲೇ ಔಟ್ ನಲ್ಲಿ ಘಟನೆ ನಡೆದಿತ್ತು. ಕಾರು ಚಾಲಕನಾಗಿದ್ದ ಮಂಜುನಾಥ್ (29) ಅಂದು ಮನೆಗೆ ಬಂದಿದ್ದ 8 ವರ್ಷದ ಬಾಲಕೆ ಮೇಲೆ ಅತ್ಯಾಚಾರ ಮಾಡಿದ್ದ.

ಪ್ರಕರಣ ಸಂಬಂಧ ಬಾಲಕಿಯ ಪೋಷಕರು ಪ್ರಕರಣವನ್ನು ದಾಖಲಿಸಿದ್ದರು. ತನಿಖೆ ವೇಳೆ ಮಂಜುನಾಥ್ ತಪ್ಪಿರುವುದಾಗಿ ತಿಳಿದುಬಂದಿತ್ತು. ಇದರಂತೆ ಇಂದು ವಿಚಾರಣೆ ನಡೆಸಿರುವ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಮಂಜುನಾಥ್ ಗೆ 10 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಿದೆ.

ಅಲ್ಲದೆ, ರು.30 ಸಾವಿರ ಹಣವನ್ನು ಬಾಲಕಿಗೆ ಪರಿಹಾರವಾಗಿ ನೀಡುವಂತೆ ಹೇಳಿದೆ. ಒಂದು ವೇಳೆ ಮಂಜುನಾಥ್ ಪರಿಹಾರ ಹಣವನ್ನು ನೀಡಿದೇ ಇದ್ದ ಪಕ್ಷದಲ್ಲಿ ಮತ್ತೆರಡು ವರ್ಷ ಜೈಲು ಶಿಕ್ಷೆಯನ್ನು ಹೆಚ್ಚಿಸಲಾಗುತ್ತದೆ ಎಂದು ಹೇಳಿದೆ.

Write A Comment