ರಾಷ್ಟ್ರೀಯ

‘ಮರ್ಯಾದಾ ಹತ್ಯೆ’ ಆರೋಪಿ ಗಡೀಪಾರು, ಕೆನಡಾ ಕೋರ್ಟ್ ತಡೆ

Pinterest LinkedIn Tumblr

canada-courtಟೊರಂಟೊ: ‘ಮರ್ಯಾದಾ ಹತ್ಯೆ’ ಪ್ರಕರಣದಲ್ಲಿ ವಿಚಾರಣೆ ಎದುರಿಸಲು ಭಾರತದ ಒಬ್ಬ ವ್ಯಕ್ತಿ ಮತ್ತು ಆತನ ಸಹೋದರಿಯನ್ನು ಭಾರತಕ್ಕೆ ಗಡೀಪಾರು ಮಾಡುವುದಕ್ಕೆ ಕೆನಡಾ ನ್ಯಾಯಾಲಯವೊಂದು ತಡೆಯಾಜ್ಞೆ ನೀಡಿದೆ. ಪಂಜಾಬ್​ನಲ್ಲಿ ತನ್ನ ಸೊಸೆಯ ’ಮರ್ಯಾದಾ ಹತ್ಯೆ’ ನಡೆಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಇವರಿಗೆ ಭಾರತದಲ್ಲಿ ನ್ಯಾಯ ಸಿಗದೇ ಹೋಗಬಹುದು ಎಂಬ ನೆಲೆಯಲ್ಲಿ ನ್ಯಾಯಾಲಯ ಈ ತಡೆಯಾಜ್ಞೆ ನೀಡಿದೆ.

ಸುರ್ಜಿತ್ ಬದೇಶಾ ಮತ್ತು ಅವರ ಸಹೋದರಿ ಮಲ್ಕಿತ್ ಸಿಧು ಅವರು ಮಲ್ಕಿತ್ ಪುತ್ರಿ ಜಸ್ಸಿ (ಜಸ್ವಿಂದರ್) ಸಿಧು ಪಂಜಾಬಿನ ಕೆಳಜಾತಿಯ ಆರೋರಿಕ್ಷಾ ಚಾಲಕನೊಬ್ಬನನ್ನು ಮದುವೆಯಾದ ಕಾರಣಕ್ಕಾಗಿ ಆಕೆಯ ಹತ್ಯೆಗಾಗಿ ಗುತ್ತಿಗೆ ಹಂತಕರನ್ನು 2000ದ ಜೂನ್ ತಿಂಗಳಲ್ಲಿ ನಿಯೋಜಿಸಿದ್ದರು ಎನ್ನಲಾಗಿದೆ.

ಕೆನಡಾದಲ್ಲಿ ಜನಿಸಿದ್ದ ಜಸ್ವಿಂದರ್ ಸಿಧು 1996ರಲ್ಲಿ ಪಂಜಾಬಿಗೆ ಭೇಟಿ ನೀಡಿದ್ದಾಗ ಜಗ್ರಾಂವ್​ನಲ್ಲಿ ಆಟೋರಿಕ್ಷಾ ಚಾಲಕ ಸುಖ್ವಿಂದರ್ ಸಿಂಗ್ (ಮಿಥು) ಅವರನ್ನು ಭೇಟಿಯಾಗಿ ಪ್ರೇಮಪಾಶದಲ್ಲಿ ಸಿಲುಕಿದ್ದಳು. ಇಬ್ಬರೂ ರಹಸ್ಯವಾಗಿ 1999ರಲ್ಲಿ ಮದುವೆಯಾಗಿದ್ದರು. ಸುಖ್ವಿಂದರ್ ಗ್ರಾಮದ ಬಳಿ 2000ದ ಜೂನ್ ತಿಂಗಳಲ್ಲಿ ಜಸ್ವಿಂದರ್ ಹತ್ಯೆಯಾಗಿತ್ತು. ಪಂಜಾಬ್ ಪೊಲೀಸರ ತನಿಖೆಯಿಂದ ಇದು ಜಸ್ವಿಂದರ್ ತಾಯಿ ಮಲ್ಕಿತ್ ಸಿಧು ಮತ್ತು ಬಾಲಕಿಯ ಮಾವ ಸುರ್ಜಿತ್ ಬದೇಶಾ ಅವರು ಕೆನಡಾದಲ್ಲಿ ಇದ್ದಾಗ ಹೆಣೆದ ‘ಮರ್ಯಾದಾ ಹತ್ಯೆ’ ಎಂಬುದು ದೃಢಪಟ್ಟಿತ್ತು.

Write A Comment