ರಾಷ್ಟ್ರೀಯ

ರಸ್ತೆ ಅಪಘಾತ ಒಂದೇ ಕುಟುಂಬದ ಮೂವರ ಸಾವು

Pinterest LinkedIn Tumblr

accidentಗೋಣಿಕೊಪ್ಪಲು : ಸಮೀಪದ ಸತ್ಯಮಂಗಲದಲ್ಲಿ ಲಾರಿ ಮತ್ತು ಮಾರುತಿ ಓಮ್ನಿ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಪತಿ, ಪತ್ನಿ ಮತ್ತು ಮೊಮ್ಮಗಳು ಮೃತರಾಗಿದ್ದಾರೆ.

ಕೊಡಗು ಜಿಲ್ಲೆಯ ಗೋಣಿಕೊಪ್ಪದ ಮುರುಗಾ(48), ಮುತ್ತುಕನ್ನಾ(40) 9 ತಿಂಗಳ ಮಗು ತಸ್ವಿ ಮೃತರಾದವರು. ಮುರುಗಾ ಅವರು ತಮ್ಮ ಕುಟುಂಬ ಸಮೇತ ತಮಿಳುನಾಡಿಗೆ ತೆರಳುತ್ತಿದ್ದಾಗ ಮುಂಜಾವ 4 ಗಂಟೆ ಸುಮಾರಿಗೆ ಲಾರಿ ಜೊತೆ ಮುಖಾಮುಖಿ ಢಿಕ್ಕಿಯಾಗಿದೆ. ಮೂವರು ಸ್ಥಳದಲ್ಲಿಯೇ ಅಸುನೀಗಿದ್ದಾರೆ. ಮುರುಗ ಅವರ ಅಳಿಯ ಹಾಗೂ ಮಗಳಿಗೆ ಗಾಯವಾಗಿದೆ.

Write A Comment