ಕರ್ನಾಟಕ

ಆಶಾ ಗೆ ಮಿಸ್ ಇಂಡಿಯಾ ಸೌಥ್ ಮತ್ತು ವಿದ್ಯಾಭರಣ ಮಿಸ್ಟರ್ ಇಂಡಿಯಾ ಸೌಥ್-2016 ಕಿರೀಟ

Pinterest LinkedIn Tumblr

missಬೆಂಗಳೂರು, ಫೆ.24- ಆಶಾ ವೈ.ಆರ್.ಮಿಸ್ ಇಂಡಿಯಾ ಸೌತ್ ಮತ್ತು ವಿದ್ಯಾಭರಣ್ ಮಿಸ್ಟರ್ ಇಂಡಿಯಾ ಸೌಥ್-2016 ಕಿರೀಟಕ್ಕೆ ಭಾಜನರಾದರು. ಪ್ಯಾಷನ್ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸುವ ಮೂಲಕ, ಯುವಕ-ಯುವತಿಯರನ್ನು ಚಿತ್ರರಂಗಕ್ಕೂ ಪರಿಚಯಿಸುತ್ತಿರುವ ಸಿಲ್ವರ್  ಸ್ಟಾರ್ ಮಾಡೆಲಿಂಗ್ ಏಜೆನ್ಸಿ ಈ ಮಿಸ್ ಇಂಡಿಯಾ ಸೌಥ್ ಮತ್ತು ಮಿಸ್ಟರ್ ಇಂಡಿಯಾ ಸೌಥ್-2016 ಸ್ಫರ್ಧೆಯನ್ನು ಏರ್ಪಡಿಸಿತ್ತು. ಇತ್ತೀಚೆಗ ವರ್ಣರಂಜಿತ ವೇದಿಕೆಯ ಮೇಲೆ ಆರಂಭವಾದ ಈ ಸೌಂದರ್ಯ  ಸ್ಫರ್ಧೆಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಸೀಮಾಂಧ್ರ ಮತ್ತು ತೆಲಂಗಾಣದಿಂದ ಆಯ್ದ 50 ಸ್ಫರ್ಧಿಗಳು ಪಾಲ್ಗೊಂಡಿದ್ದರು.

ಮಹಿಳೆಯರ ವಿಭಾಗದಲ್ಲಿ ತೀವ್ರ ಪೈಪೋಟಿಯ ಮಧ್ಯೆ ಆಶಾ ವೈ.ಆರ್ ಗೆ ಮಿಸ್ ಇಂಡಿಯಾ ಸೌತ್ ಕಿರೀಟ ದಕ್ಕಿದರೇ, ರೀತು ಶರ್ಮ ಮತ್ತು ರೈ ನಲವಡೆ ಕ್ರಮವಾಗಿ ಮೊದಲ ಮತ್ತು ದ್ವಿತೀಯ ರನ್ನರ್ ಅಪ್ ಪ್ರಶಸ್ತಿಗೆ ಭಾಜನರಾದರು.  ಇನ್ನೂ ಪುರುಷರ ವಿಭಾಗದಲ್ಲಿಯೂ ಸಹ ಸಾಕಷ್ಟು ಪೈಪೋಟಿ ಎದುರಾಯಿತು, ಎಲ್ಲ ಸುತ್ತುಗಳನ್ನು ಸಮರ್ಥವಾಗಿ ನಿಭಾಯಿಸಿದ ವಿದ್ಯಾಭರಣ್‌ಗೆ ಮಿಸ್ಟರ್ ಇಂಡಿಯಾ ಸೌಥ್-2016 ಕಿರೀಟ ದಕ್ಕಿದರೇ, ಮಂಜುನಾಥ್ ಮತ್ತು ಲೆಸ್ಸಿ ಮೊದಲ ಮತ್ತು ದ್ವಿತೀಯ ರನ್ನರ್ ಅಪ್ ಪ್ರಶಸ್ತಿಗೆ ಭಾಜನರಾದರು. ನಿರ್ದೇಶಕ ವಿಕ್ಟರಿ ವಾಸು, ಐಶ್ವರ್ಯ, ವೈಷ್ಣವಿ, ಸೇರಿದಂತೆ ಕನ್ನಡ ಚಲನಚಿತ್ರ ರಂಗದ ಹಲವಾರು ಗಣ್ಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.

ಈ ಕಾರ್ಯಕ್ರಮದ ಇನ್ನೊಂದು ಪ್ರಮುಖ ಆಕರ್ಷಣೆ ಮಕ್ಕಳ ರ್ಯಾಂ ಪ್ ವಾಕ್, ಹೌದು ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎನ್ನುವಂತೆ, ಬಾಲ ಪ್ರತಿಭೆಗಳನ್ನು ಗುರುತಿಸಿ ಅವರಲ್ಲಿ ಅಡಗಿರುವ ಸೂಪ್ತ ಪ್ರತಿಭೆಯನ್ನು ಹೊರ ಹಾಕುವುದರಲ್ಲಿ ಈ ಕಾರ್ಯಕ್ರಮ ಅತ್ಯಂತ ಸೂಕ್ತವಾಗಿತ್ತು ಎಂದು ಸಿಲ್ವರ್ ಸ್ಟಾರ್ ಮಾಡೆಲಿಂಗ್ ಎಜೆನ್ಸಿಯ ಮಾಲೀಕ ಜೆ.ಎನ್. ರವಿ ತಿಳಿಸಿದರು.

Write A Comment