ಕರ್ನಾಟಕ

ಬಾಲಿವುಡ್‍ಗೆ ಹಾರಲಿದ್ದಾರೆ ನಟಿ ಮೈತ್ರಿಯಾ ಗೌಡ

Pinterest LinkedIn Tumblr

mytri

ಬೆಂಗಳೂರು: ಕಾಂಟ್ರವರ್ಸಿ ಕ್ವೀನ್ ನಟಿ ಮೈತ್ರಿಯಾ ಗೌಡ ಬಾಲಿವುಡ್ ಬಾಗಿಲು ಬಡಿಯುತ್ತಿದ್ದಾರೆ. ಶ್ರಾಪ್ ತ್ರೀಡಿ ಎಂಬ ಹಾರರ್ ಚಿತ್ರದಲ್ಲಿ ಅವರಿಗೆ ನಟಿಸಲು ಆಫರ್ ಬಂದಿದ್ದು, ಇದರ ಬಗ್ಗೆ ಫೇಸ್‍ಬುಕ್‍ನಲ್ಲಿ ಖುಷಿ ಹಂಚಿಕೊಂಡಿದ್ದಾರೆ.

ಈ ಮೂಲಕ ಸದಾ ಒಂದಿಲ್ಲೊಂದು ಕಾಂಟ್ರವರ್ಸಿ ಇಂದಾನೇ ಸುದ್ದಿಯಾಗುತ್ತಿದ್ದ ಮೈತ್ರಿಯಾ ಗೌಡ ಇದೇ ಮೊದಲ ಬಾರಿಗೆ ಸಿನಿಮಾ ಸಂಬಂಧವಾಗಿ ಸುದ್ದಿಯಾಗುತ್ತಿದ್ದಾರೆ. ಫೈಸಲ್ ಸೈಫ್ ನಿರ್ದೇಶನದಲ್ಲಿ ಶ್ರಾಪ್ ತ್ರೀಡಿ ಚಿತ್ರ ಮೂಡಿಬರಲಿದ್ದು, ಸುಮಾರು 500 ಹುಡುಗಿಯರನ್ನು ಆಡಿಷನ್ ಮಾಡಿ ಅವರೆಲ್ಲರನ್ನೂ ಬಿಟ್ಟು ಮೈತ್ರಿಯಾ ಗೌಡಗೆ ಈ ಅವಕಾಶ ಒಲಿದುಬಂದಿದೆ.

ಇದೊಂದು ವ್ಯಾಂಪೈರ್ ಹಾರರ್ ಚಿತ್ರವಾಗಿದ್ದು, ಬಿ-ಟೌನ್‍ನಲ್ಲಿ ಈ ಶೈಲಿಯಲ್ಲಿ ನಿರ್ಮಾಣವಾಗುತ್ತಿರೋ ಮೊದಲ ಬಾಲಿವುಡ್ ಸಿನಿಮಾ ಎಂಬುದು ಚಿತ್ರದ ಹೆಗ್ಗಳಿಕೆ. ಈ ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಶುರುವಾಗಲಿದ್ದು, ಮೈತ್ರಿಯಾ ಗೌಡ ಪಾತ್ರ ಹೇಗಿರುತ್ತದೆ ಅನ್ನೋದು ಸದ್ಯಕ್ಕೆ ಕುತೂಹಲ ಹುಟ್ಟಿಸಿದೆ.

Write A Comment