ಪುಣೆ: 1993ರ ಮುಂಬೈ ಸರಣಿ ಬಾಂಬ್ ಸ್ಪೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಪುಣೆಯ ಯರವಾಡ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ನಟ ಸಂಜಯ್ ದತ್ ಅವರನ್ನು ಸನ್ನಡತೆ ಆಧಾರದ ಮೇಲೆ ಗುರುವಾರ ಬಿಡುಗಡೆಗೊಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
56 ವರ್ಷದ ಸಂಜಯ್ ದತ್ ಕಳೆದ 5 ವರ್ಷಗಳಿಂದ ಜೈಲುವಾಸ ಅನುಭವಿಸುತ್ತಿದ್ದರು. ಗುರುವಾರ ಬೆಳಗ್ಗೆ 9 ಗಂಟೆಗೆ ಜೈಲಿನಿಂದ ಬಿಡುಗಡೆಗೊಳ್ಳುವ ಸಂಜಯ್ ದತ್ ಅವರನ್ನು ಅವರ ಪತ್ನಿ ಹಾಗೂ ಮಕ್ಕಳು ಸ್ವಾಗತಿಸಲಿದ್ದಾರೆ.
ಸಂಜಯ್ ದತ್ ಬಿಡುಗಡೆಯಾಗುವ ದಿನ ಅಭಿಮಾನಿಗಳಿಗಾಗಿ ಜೈಲಿನ ಆವರಣದಲ್ಲಿ ಸಣ್ಣದೊಂದು ಕಾರ್ಯಕ್ರಮ ನಡೆಸಲು ಅನುಮಿತ ನೀಡುವಂತೆ ದತ್ ಕುಟುಂಬ ಪೊಲೀಸ್ ಇಲಾಖೆಗೆ ಮನವಿ ಮಾಡಿತ್ತು. ಆದರೆ ಭದ್ರತೆ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಲಾಗಿದೆ.