ಕರ್ನಾಟಕ

ಬಾಗಲಕೋಟೆಯಲ್ಲಿ ಪಾಕ್‍ಗೆ ಜೈಕಾರ ಕೂಗಿದ ಆಟೋ ಚಾಲಕ ಅರೆಸ್ಟ್

Pinterest LinkedIn Tumblr

bagal

ಬಾಗಲಕೋಟೆ: ಪಾಕಿಸ್ತಾನಕ್ಕೆ ಜೈ ಎಂದ ಆಟೋ ಚಾಲಕನಬ್ಬ ಸದ್ಯ ಪೊಲೀಸರ ಅಥಿತಿಯಾಗಿರುವ ಘಟಣೆ ಬಾಗಲಕೋಟೆ ನಗರದಲ್ಲಿ ನಡೆದಿದೆ.

ಬಾಗಲಕೋಟೆ ತಾಲೂಕಿನ ಮುಚಖಂಡಿ ತಾಂಡ ನಿವಾಸಿ ದೇವೇಂದ್ರ ಲಮಾಣಿ ಎಂಬವನೇ ದೇಶವಿರೋಧಿ ಘೋಷಣೆ ಕೂಗಿರುವ ಆರೋಪಿ. ನಗರದ ಬಸವೇಶ್ವರ ಸರ್ಕಲ್ ಬಳಿ ಮೋಟಗಿ ಬಸವೇಶ್ವರರ ಜಾತ್ರೆಯ ಪ್ರಯುಕ್ತ ಇಲ್ಲಿನ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಆ ಸಮಯದಲ್ಲಿ ಅಲ್ಲಿ ಸೇರಿದ್ದ ಜನ ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗಳನ್ನ ಕೂಗಿದ್ರು. ಆದ್ರೆ ಪಕ್ಕದಲ್ಲಿದ್ದ ದೇವೆಂದ್ರ ಲಮಾಣಿ, ಪಾಕಿಸ್ತಾನ್ ಕೀ ಜೈ ಎಂದು ಘೊಷಣೆಗಳನ್ನ ಕೂಗುತ್ತಿದ್ದಂತೆ ಎಲ್ಲರೂ ಗಾಬರಿಯಾದ್ರು.

ನಂತರ ಅಲ್ಲೇ ಇದ್ದ ನಗರ ಪೊಲೀಸರು ದೇವೇಂದ್ರನನ್ನ ಬಂಧಿಸಿ, ದೇಶ ವಿರೋಧಿ ಘೋಷಣೆ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ. ಆದ್ರೆ ಆರೋಪಿ ದೇವೆಂದ್ರ, ನಾನು ಬಡವ, ತಮಾಷೆಗಾಗಿ ಈ ರೀತಿ ಘೋಷಣೆ ಕೂಗಿದ್ದು ತಪ್ಪಾಯಿತು ಎಂದು ಸಮಜಾಯಿಸಿ ನೀಡಿದ್ದಾನೆ.

Write A Comment