ಕರ್ನಾಟಕ

ಜೆಎನ್‌ಯು ಆಡಳಿತ ವಿರುದ್ಧ ವಿಜ್ಞಾನಿಗಳ ಕಿಡಿ

Pinterest LinkedIn Tumblr

Kolkata: Lawyers of Calcutta High Court participate in an agitation against Central Government over JNU row in Kolkata on Wednesday. PTI Photo by Swapan Mahapatra (PTI2_17_2016_000114A)

ಬೆಂಗಳೂರು: ದೆಹಲಿಯ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ವಿದ್ಯಾರ್ಥಿ ಸಂಘಟನೆಯ ನಾಯಕ ಕನ್ಹಯ್ಯಾ ಕುಮಾರ್‌ ಅವರನ್ನು ದೇಶದ್ರೋಹದ ಆರೋಪದಲ್ಲಿ ಬಂಧಿಸಿರುವುದನ್ನು ದೇಶದ ಪ್ರಮುಖ ವಿಜ್ಞಾನಿಗಳು, ಪ್ರತಿಷ್ಠಿತ ಸಂಸ್ಥೆಗಳ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ವಿರೋಧಿಸಿದ್ದಾರೆ.

ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ  ಆಡಳಿತ ತೋರಿದ ವರ್ತನೆ ಖಂಡನೀಯ ಎಂದು ಹೇಳಿದ್ದು, ವಿದ್ಯಾರ್ಥಿ ಬಂಧನವನ್ನು ವಿಶ್ವವಿದ್ಯಾ ಲಯ ಸಮರ್ಥಿಸಿಕೊಂಡಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ), ಹೈದರಾಬಾದ್‌, ಮುಂಬೈ ಐಐಟಿಗಳು, ಐಐಎಂಬಿ ಸೇರಿ ದಂತೆ ದೇಶದ ವಿವಿಧ ಪ್ರತಿಷ್ಠಿತ ಸಂಸ್ಥೆಗಳ 379 ವಿಜ್ಞಾನಿಗಳು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಜೆಎನ್‌ಯು ಕುಲ ಪತಿ ಪ್ರೊ. ಎಂ ಜಗದೀಶ್‌ ಕುಮಾರ್‌ ಅವರಿಗೆ ಪತ್ರ ಬರೆದು ತಮ್ಮ ಅತೃಪ್ತಿ ಹೊರಹಾಕಿದ್ದಾರೆ.

‘ಅಫ್ಜಲ್‌ ಗುರುವನ್ನು ಗಲ್ಲಿಗೇರಿಸಿದ  ಮೊದಲ ವರ್ಷಾಚರಣೆಯ ದಿನದಂದು ನಡೆದ ರ್‍್ಯಾಲಿಯನ್ನು ಜೆಎನ್‌ಯು ವಿದ್ಯಾರ್ಥಿ ನಾಯಕ ಆಯೋಜಿಸಿರಲಿಲ್ಲ. ಒಗ್ಗಟ್ಟು ಪ್ರದರ್ಶಿಸುವುದಕ್ಕಾಗಿ ಅದರಲ್ಲಿ ಭಾಗವಹಿಸಿದ್ದರು. ಆದರೂ, ರ್‍್ಯಾಲಿಯ ಆಯೋಜಕರು  ಮತ್ತು ಅಂದು ಭಾಷಣ ಮಾಡಿದವರ ಕುರಿತು ಹೇಳುವುದಾದರೆ;  ಶಾಂತಿಯುತವಾದ ವೇದಿಕೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡುವುದನ್ನು ದೇಶದ್ರೋಹದೊಂದಿಗೆ ಸಮೀಕರಿಸಲು ಸಾಧ್ಯವಿಲ್ಲ ಎಂಬ ಸಂಗತಿಯನ್ನು ನೀವು  ಒಪ್ಪಿಕೊಳ್ಳುತ್ತೀರಿ ಎಂಬ ವಿಶ್ವಾಸವಿದೆ’ ಎಂದು ಪತ್ರದಲ್ಲಿ ಹೇಳಿದ್ದಾರೆ.

‘ಅಫ್ಜಲ್‌ ಗುರು ಭಯೋತ್ಪಾದಕ ಎಂದು ಘೋಷಿಸಿ ಕೇಂದ್ರ ಸರ್ಕಾರ ಗಲ್ಲಿಗೇರಿಸಿದೆ. ಹೀಗಿರುವಾಗ  ಭಾರತ ವಿರೋಧಿ ಕಾರ್ಯಕ್ರಮ ಆಯೋ ಜಿಸಲು ನಾವು ಅವಕಾಶ ನೀಡುವು ದಾದರೂ ಹೇಗೆ  ಎಂಬ ಜೆಎನ್‌ಯು ಕುಲಸಚಿವ ಭೂಪೀಂದರ್‌ ಜುತ್ಸಿ ಅವರ ಹೇಳಿಕೆಯಿಂದ ನೋವಾಗಿದೆ. ಇದು ಶೈಕ್ಷಣಿಕ ಸ್ವಾತಂತ್ರ್ಯದ ಪರಿಕಲ್ಪನೆಯ ಕುರಿತಾಗಿ ವಿಶ್ವವಿದ್ಯಾಲ ಯಕ್ಕೆ ಸಂವೇದನೆ ಇಲ್ಲದಿರುವುದನ್ನು ಸ್ಪಷ್ಟವಾಗಿ ತೋರಿಸು ತ್ತದೆ’ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

‘ಭಾರತ ವಿಶಾಲ ದೇಶ. ಯಾರು ರಾಷ್ಟ್ರೀಯವಾದಿ, ಯಾರು ರಾಷ್ಟ್ರ ವಿರೋಧಿ ಎಂಬುದನ್ನು ಯಾವುದೇ ಒಂದು ಗುಂಪು ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಬಹುತ್ವದ ನಿಲುವುಗಳಿಗೆ ನಮ್ಮ ದೇಶದಲ್ಲಿ ಜಾಗವಿದೆ. ಈಗ ನಡೆದಿರುವ ಘಟನೆಗಳು ಭಿನ್ನ ನಿಲುವುಗಳನ್ನು ಹತ್ತಿಕ್ಕಲು ಮಾಡಿದ ಪ್ರಯತ್ನವಾಗಿದೆ. ಇದು ನಮ್ಮ ಪ್ರಜಾಪ್ರಭುತ್ವಕ್ಕೆ ಹಾನಿ ಯುಂಟು ಮಾಡುತ್ತದೆ’ ಎಂದಿದ್ದಾರೆ.

‘ಸರ್ಕಾರವು ನಿಮ್ಮ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಕ್ರಮ ಕೈಗೊಂಡಿದೆ. ಜೆಎನ್‌ಯು ಆಡಳಿತವು ಈ ದಾಳಿಗಳಿಂದ ಮತ್ತು ಪೊಲೀಸ್‌ ತನಿಖೆಯಿಂದ ವಿದ್ಯಾರ್ಥಿಗಳಿಗೆ ರಕ್ಷಣೆ ನೀಡಬೇಕಾಗಿತ್ತು.  ಆದರೆ, ಈ ಜವಾ ಬ್ದಾರಿ ನಿರ್ವಹಿಸಲು ತಾವು ವಿಫಲರಾ ಗಿರುವುದು ನಮ್ಮಲ್ಲಿ ನಿರಾಸೆ ಉಂಟು ಮಾಡಿದೆ’ ಎಂದ ಅವರು ಉಪ ಕುಲಪತಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.ಕೆರಾಲ್‌ ಉಪಾಧ್ಯ, ಶ್ರೀಕಾಂತ್‌ ಶಾಸ್ತ್ರಿ, ಸೈತಿಕ್‌ ಘೋಷ್‌, ಶರತ್‌ ಅನಂತಮೂರ್ತಿ, ರಾಹುಲ್‌ ಡೇ, ಎಂ.ವಿ. ರಮಣ, ರಿತಿಕಾ ಖೇರ್‌, ದೀಪಾ ಅಗಾಸೆ ನಿತಿನ್‌ ರೈ ಮತ್ತಿ ತರರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.

Write A Comment