ಚಿತ್ರರಂಗದ ಪ್ರಮುಖರು ಶುಭ ಕೋರುತ್ತಿದ್ದರೆ ನಾಯಕ ಅನಿಶ್, ನಿರ್ದೇಶಕ ನವೀನ್ ರೆಡ್ಡಿ ವಿನೀತರಾಗಿ ಮುಗುಳ್ನಗುತ್ತಿದ್ದರು. ಚಿತ್ರತಂಡಕ್ಕೆ ಒಂದು ಹಂತ ಮುಟ್ಟಿದ ಸಂಭ್ರಮ. ಅದು ‘ಅಕಿರ’ ಚಿತ್ರದ ಟ್ರೇಲರ್ ಬಿಡುಗಡೆ ಸಮಯ. ಚಿತ್ರತಂಡದ ಮಾತು ಕಡಿಮೆಯಾಗಿ ಶುಭ ಹಾರೈಕೆಗಳು ಜೋರಾಗಿದ್ದವು.
‘ನಾಲ್ಕು ವರ್ಷಗಳಿಂದ ಸೈಕಲ್ ಹೊಡೆಯುತ್ತಿದ್ದೆ. ಈ ಚಿತ್ರ ನನಗೆ ಬ್ರೇಕ್ ಕೊಡಿಸುತ್ತದೆ’ ಎಂದು ವಿಶ್ವಾಸದಿಂದ ಹೇಳಿದರು ಅನಿಶ್. ನವೀನ್ ರೆಡ್ಡಿ, ನಾರ್ವೆಯಲ್ಲಿ ಚಿತ್ರೀಕರಣದ ಅನುಭದ ಬಗ್ಗೆ ಮಾತನಾಡಿದರು. ‘ಅಕಿರ’ ತ್ರಿಕೋನ ಪ್ರೇಮಕಥೆಯ ಚಿತ್ರ. ಅನಿಶ್ ಜತೆ ಅದಿತಿ, ಕೃಷಿತಾ ಹಾಡಿದ್ದಾರೆ.
ನಿರ್ದೇಶಕರಾದ ಯೋಗರಾಜ ಭಟ್, ಸಂತು, ಚೇತನ್ ಕುಮಾರ್, ಪ್ರಭು ಶ್ರೀನಿವಾಸ್, ಶಂಕರ್, ರಿಷಬ್ ಶೆಟ್ಟಿ, ನಟರಾದ ರಕ್ಷಿತ್ ಶೆಟ್ಟಿ, ವಿಜಯ ರಾಘವೇಂದ್ರ, ಸಿಂಧೂ ಲೋಕನಾಥ್, ಮೇಘನಾ ಗಾಂವ್ಕರ್, ಆನಂದ್ ಆಡಿಯೊನ ಶ್ಯಾಮ್ ಮತ್ತಿತರರು ‘ಅಕಿರ’ವನ್ನು ಹರಸಲು ಬಂದಿದ್ದ ಪ್ರಮುಖರು. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.
ಚೇತನ್, ಸೋಮಶೇಖರರೆಡ್ಡಿ ಚಿತ್ರಕ್ಕೆ ಹಣ ಹೂಡುವ ಮೂಲಕ ಚಂದನವನ ಪ್ರವೇಶಿಸಿದ್ದಾರೆ.