ಅಂತರಾಷ್ಟ್ರೀಯ

ಚೀನಾ ಮಹಾನ್ ಕಳ್ಳ ರಾಷ್ಟ್ರ: ಟ್ರಂಪ್‌ ಕಿಡಿ

Pinterest LinkedIn Tumblr

Trump-Oneವಾಷಿಂಗ್ಟನ್‌ (ಪಿಟಿಐ): ಅಮೆರಿಕ ಅಧ್ಯಕ್ಷರ ಚುನಾವಣಾ ಸ್ಪರ್ಧೆಯಲ್ಲಿರುವ ರಿಪಬ್ಲಿಕನ್ ಪಕ್ಷದ ಹುರಿಯಾಳು ಡೊನಾಲ್ಡ್ ಟ್ರಂಪ್‌ ಅವರು ಚೀನಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಅದು ‘ಸರ್ವಕಾಲಿಕ ದೊಡ್ಡ ದರೋಡೆಕೋರ’ ಎಂದು ಜರೆದಿದ್ದಾರೆ.

‘ಚೀನಾವು ಸರ್ವಕಾಲಿಕ ಮಹಾನ್ ದರೋಡೆಕೋರರಲ್ಲಿ ಒಂದೆನಿಸಿಕೊಂಡಿದೆ. ಅವರು ಅಮೆರಿಕಕ್ಕಾಗಿ ಏನು ಮಾಡಿದ್ದಾರೆ. ಅವರು ನಮ್ಮ ರಾಷ್ಟ್ರಕ್ಕೆ ಏನು ಮಾಡುತ್ತಿದ್ದಾರೋ ಅದನ್ನು ಮುಂದುವರೆಸಲು ಬಿಡುವುದಿಲ್ಲ’ ಎಂದು ಬುಧವಾರ ಗುಡುಗಿದ್ದಾರೆ.

‘ಆ ರಾಷ್ಟ್ರಗಳು ತಮ್ಮ ಕರೆನ್ಸಿಯ ಅಪಮೌಲ್ಯೀಕರಣದ ಮೂಲಕ ನಮ್ಮನ್ನು ಕೊಲ್ಲುತ್ತಿವೆ. ಇಂಥ ಸನ್ನಿವೇಶದಲ್ಲಿ ನಮ್ಮ ಕಂಪೆನಿಗಳು ಸ್ಪರ್ಧಿಸಲಾಗದು. ಯೆನ್ ಕರೆನ್ಸಿ ಅಪಮೌಲ್ಯದಿಂದ ಜಪಾನಿನಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಗಮನಿಸಿ. ಅಲ್ಲಿನ ಟ್ರ್ಯಾಕ್ಟರ್ ತಯಾರಿಕಾ ಕಂಪೆನಿಯ ಕೊಮಾತ್ಸು ವಿರುದ್ಧದ ಸ್ಪರ್ಧೆಯಲ್ಲಿ ಅಮೆರಿಕದ ಕಾರ್ಟರ್‌ಪಿಲ್ಲರ್‌ ಕಂಪೆನಿಯು ಕಠಿಣ ಸಮಯ ಎದುರಿಸುತ್ತಿದೆ’ ಎಂದಿದ್ದಾರೆ.

ಇದೇ ವೇಳೆ, ಅಧ್ಯಕ್ಷ ಪಟ್ಟಕ್ಕೇರಿದರೆ ಚೀನಾದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ 40–45ರಷ್ಟು ಹೆಚ್ಚುವರಿ ಸುಂಕ ವಿಧಿಸುವುದಾಗಿ ಅವರು ಬೆದರಿಸಿದ್ದಾರೆ.

Write A Comment