ಕರ್ನಾಟಕ

ಬನ್ನೇರುಘಟ್ಟದಿಂದ ತಪ್ಪಿಸಿಕೊಂಡ ಚಿರತೆ ಇನ್ನೂ ಪತ್ತೆ ಇಲ್ಲ, ಸುತ್ತಮುತ್ತಲ ಗ್ರಾಮಸ್ಥರಲ್ಲಿ ಆತಂಕ

Pinterest LinkedIn Tumblr

Leopard-schoolಬೆಂಗಳೂರು(ಫೆ.16): ನಿನ್ನೆ ಬೆಳಗ್ಗೆ ಸುಮಾರು 6:30 ರ ಸುಮಾರಿಗೆ ಬನ್ನೇರುಘಟ್ಟ ಜೈವಿಕ ಉದ್ಯಾವನದ ಪುನರ್ವಸತಿ ಕೇಂದ್ರದಿಂದ ತಪ್ಪಿಸಿಕೊಂಡು ಕಾಡಿನತ್ತ ಪರಾರಿಯಾಗಿದ್ದ ಚಿರತೆ ಪತ್ತೆಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸುತ್ತಮುತ್ತ ಅರಣ್ಯಕ್ಕೆ ಹೊಂದಿಕೊಂಡಂತಿರುವ ರಾಗಿಹಳ್ಳಿ, ಹಕ್ಕಿಪಿಕ್ಕಿ ಕಾಲೋನಿ, ಭೂತಾನಹಳ್ಳಿ ಸೇರಿದಂತೆ ಹತ್ತಕ್ಕು ಹೆಚ್ಚು ಹಳ್ಳಿಗಳ ಬಳಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಆದರೆ, ಇಲ್ಲಿಯವರೆಗೆ ಚಿರತೆ ಸುಳಿವು ಮಾತ್ರ ಸಿಕ್ಕಿಲ್ಲ.

ಇನ್ನೂ, ಚಿರತೆ ತಪ್ಪಿಸಿಕೊಂಡಿರುವ ಪರಿಣಾಮ ಬನ್ನೇರುಘಟ್ಟ ಉದ್ಯಾನವನದ ಸುತ್ತಮುತ್ತಲ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಮಕ್ಕಳು ಶಾಲೆಗೆ ಹೋಗಲು ಹೆದರುತ್ತಿದ್ದಾರೆ. ಪಾದಚಾರಿಗಳು, ವಾಹನ ಸವಾರರು ಸಂಚಾರ ಮಾಡಲು ಹೆದರುತ್ತಿದ್ದಾರೆ.

ರೈತರಂತೂ ತಮ್ಮ ಜಾನುವಾರುಗಳನ್ನು ಕಾಡಿನತ್ತ ಬಿಡಲು ಹಿಂಜರಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟಾದ್ರು ಬನ್ನೇರುಘಟ್ಟ ಜೈವಿಕ ಉದ್ಯಾವನದ ಅಧಿಕಾರಿಗಳು ಸೂಕ್ತವಾಗಿ ಕಾರ್ಯಾಚರಣೆ ನಡೆಸುತ್ತಿಲ್ಲ ಎಂದು ಸ್ಥಳಿಯರು ಆತಂಕ ವ್ಯಕ್ತಪಡಿಸಿದ್ದಾರೆ.

Write A Comment