ಬಾಗ್ದಾದ್: ದಕ್ಷಿಣ ಬಾಗ್ದಾದ್ನಲ್ಲಿ ಇರಾಕ್ ಸೇನೆಗೆ ಸೇರಿದ ಹೆಲಿಕಾಪ್ಟರ್ ಪತನವಾಗಿ 9 ಜನ ಸಾವನ್ನಪ್ಪಿದ್ದಾರೆ. ತಾಂತ್ರಿಕ ದೋಷವೇ ಅವಘಡಕ್ಕೆ ಕಾರಣ ಎಂದು ತಿಳಿದು ಬಂದಿದೆ.
ರಷ್ಯಾ ನಿರ್ವಿುತ ಮಿಲಿಟರಿ ಹೆಲಿಕಾಪ್ಟರ್ ಎಮ್-17 ಮಾದರಿ ಕಾಪ್ಟರ್ ಆಗಸದಲ್ಲಿ ಪತನವಾಗಿ 9 ಮಂದಿ ಮೃತಪಟ್ಟಿದ್ದಾರೆ ಎಂದು ಬ್ರಿಗೇಡಿಯರ್ ಜನರಲ್ ಯಾಹ್ಯಾ ರಸೂಲ್ ತಿಳಿಸಿದ್ದಾರೆ.
ಇರಾಕಿನಲ್ಲಿ ಕೆಲ ವರ್ಷಗಳಿಂದ ನಿರಂತರವಾಗಿ ಹೆಲಿಕಾಪ್ಟರ್ಗಳ ಅಪಘಾತವಾಗುತ್ತಿದ್ದು ಇದು ವರ್ಷದ ಮೊದಲ ಅಪಘಾತವಾಗಿದೆ.