ರಾಷ್ಟ್ರೀಯ

ಆಂಜನೇಯನಿಗೆ ‘ರಾಕ್ಷಸ’ ಪಟ್ಟಕಟ್ಟಿದ ಕೇಜ್ರಿವಾಲ್, ದೇಶವ್ಯಾಪಿ ಟೀಕೆ

Pinterest LinkedIn Tumblr

kejrivaiನವದೆಹಲಿ: ಸದಾ ಒಂದಿಲ್ಲೊಂದು ವಿವಾದವನ್ನು ಮೈ ಮೇಲೆ ಎಳೆದುಕೊಳ್ಳುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇದೀಗ ಪ್ರಧಾನಿ ನರೇಂದ್ರ ಮೋದಿ ಟೀಕಿಸುವ ಅಬ್ಬರದಲ್ಲಿ, ದೈವ ಸ್ವರೂಪಿ ಆಂಜನೇಯನಿಗೆ ರಾಕ್ಷಸಪಟ್ಟಕಟ್ಟಿ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಕೇಜ್ರಿವಾಲ್ ಮಂಗಳವಾರ ರೇಖಾ ಚಿತ್ರವೊಂದನ್ನು ಟ್ವೀಟ್ ಮಾಡಿದ್ದಾರೆ. ಈ ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ವೇದಿಕೆ ಮೇಲೆ ನಿಂತ್ತಿದ್ದು, ಸುತ್ತಲು ಬೆಂಕಿಯ ಜ್ವಾಲೆ ಪ್ರಜ್ವಲಿಸುತ್ತಿದೆ. ದಲಿತ ವಿದ್ಯಾರ್ಥಿ ರೋಹಿತ್ ವೇಮಲು ಆತ್ಮಹತ್ಯೆ ಪ್ರಕರಣ, ಪಠಾಣ ಕೋಟ್ ಭಯೋತ್ಪಾದಕ ದಾಳಿ ಹಾಗೂ ಇದೀಗ ಜೆಎನ್​ಯುು ಗಲಾಟೆಗೆ ತನ್ನ ಬಾಲದಿಂದ ಬೆಂಕಿ ಹಚ್ಚಿಬಂದಿರುವೆ ಎಂದು ಆಂಜನೇಯ ಅವತಾರಿ ಪ್ರಧಾನಿಗೆ ವಿವರ ಒಪ್ಪಿಸುತ್ತಿರುವಂತೆ ಚಿತ್ರಿಸಲಾಗಿದೆ.

ಕೇಜ್ರಿವಾಲ್ ಟ್ವೀಟ್​ಗೆ ದೇಶಾದ್ಯಂತ ವಿರೋಧ ವ್ಯಕ್ತವಾಗಿದ್ದು, ಬಲಪಂಥಿಯರು ಆಂಜನೇಯನಿಗೆ ಮಾಡಿದ ಅವಮಾನವನ್ನು ಖಂಡಿಸಿ ಪ್ರತಿಭಟಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲೂ ತೀವ್ರವಾದ ವಿರೋಧ ವ್ಯಕ್ತವಾಗಿದೆ.

Write A Comment