ನವದೆಹಲಿ: ಜೆಎನ್ಯುು ಗಲಾಟೆ ಸಂಬಂಧಿಸಿದಂತೆ ಪಟಿಯಾಲಾ ಕೋರ್ಟ್ ಆವರಣದಲ್ಲಿ ವಕೀಲರು ನಡೆಸಿದ ದಾಳಿ ಖಂಡಿಸಿ ದೆಹಲಿ ಪತ್ರಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಸಂಸತ್ ಭವನ ಸಮೀಪ ಇರುವ ಪ್ರೆಸ್ ಕ್ಲಬ್ನಿಂದ ಆರಂಭವಾದ ಪ್ರತಿಭಟನೆ ಸುಪ್ರೀಂಕೋರ್ಟ್ವರೆಗೂ ಸಾಗಿತು. ಕೋರ್ಟ್ ಆವರಣದಲ್ಲಿ ದಾಳಿ ನಡೆಸಿದ ವಕೀಲರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪತ್ರಕರ್ತರು ಆಗ್ರಹಿಸಿದರು. ಪ್ರತಿಭಟನೆಗೆ ಜವಾಹರ್ಲಾಲ್ ನೆಹರು ವಿವಿಯ ವಿದ್ಯಾರ್ಥಿಗಳು ಕೂಡ ಬೆಂಬಲ ನೀಡಿದರು.
ಸೋಮವಾರ ವಿದ್ಯಾರ್ಥಿ ಮುಖಂಡ ಕನ್ಹಯ್ಯಾ ಕುಮಾರ್ನನ್ನು ವಿಚಾರಣೆಗೆ ಹಾಜರುಪಡಿಸುವ ಸಂದರ್ಭದಲ್ಲಿ ವಕೀಲರು, ವಿದ್ಯಾರ್ಥಿಗಳು ಹಾಗೂ ಪತ್ರಕರ್ತರ ಮಧ್ಯೆ ಗಲಾಟೆ ಆಗಿತ್ತು. ವಕೀಲರು ಈ ಸಂದರ್ಭದಲ್ಲಿ ಪತ್ರಕರ್ತರು ಹಾಗೂ ವಿದ್ಯಾರ್ಥಿಗಳನ್ನು ಥಳಿಸಿದ್ದರು.