ಕರ್ನಾಟಕ

ನೆಲಮಂಗಲದಲ್ಲಿ ಭೀಕರ ಅಪಘಾತ

Pinterest LinkedIn Tumblr

FotorCreated-2322ನೆಲಮಂಗಲ : ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ರಾಷ್ಟ್ರಿಯ ಹೆದ್ದಾರಿ 4ರಲ್ಲಿರುವ ತಿಪ್ಪಗೊಂಡಲನಹಳ್ಳಿ ಬಳಿಯಲ್ಲಿ ನಡೆದಿದೆ.

ಹರೀಶ್(26) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ, ಈತ ತುಮಕೂರು ಜಿಲ್ಲೆ ಗುಬ್ಬಿ ತಾಲುಕಿನ ನಿಟ್ಟೂರು ಗಾಮದ ನಿವಾಸಿಯಾಗಿದ್ದು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಫೆ.13ರಂದು ನಡೆದ ತಾಲುಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಮತದಾನ ಮಾಡುವುದಕ್ಕಾಗಿ ಕೆಲಸಕ್ಕೆ ರಜಾ ಹಾಕಿಕೊಂಡು ಸ್ವಗ್ರಾಮಕ್ಕೆ ತೆರಳಿ ಮಂಗಳವಾರ ಕೆಲಸಕ್ಕೆ ಹಿಂತಿರುಗುತ್ತಿದ್ದ ಮಾರ್ಗ ಮಧ್ಯೆ ದುರ್ಘಟನೆ ಸಂಭವಿಸಿದೆ. ಲಾರಿ ಮತ್ತು ಚಾಲಕನ್ನು ಗ್ರಾಮಾಂತರ ಪೊಲೀಸ್‌ ಠಾಣೆ ಸಬ್‌ಇನ್ಸ್ ಪೆಕ್ಟರ್ ಜಗದೀಶ್ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್ನು ಅಪಘಾತ ಸಂಭವಿಸಿ ಅರ್ಧ ಗಂಟೆಗಳ ನಂತರ ಆಂಬ್ಯುಲೆನ್ಸ್ ಸ್ಥಳಕ್ಕೆ ಬಂದಿದ್ದು, ಆಸ್ಪತ್ರೆಗೆ ರವಾನಿಸುವ ವೇಳೆ ನನ್ನ ಕಣ್ಣುಗಳು ದಾನ ಮಾಡಿಬಿಡಿ ಅಂತಾ ಆಂಬ್ಯುಲೆನ್ಸ್ ಸಿಬ್ಬಂದಿಗೆ ಹರೀಶ್ ಸಾಯುವ ಮುನ್ನ ಹೇಳಿ ಸಾವಿನಲ್ಲೂ ಮಾನವೀಯತೆ ಮೆರೆದಿದ್ದಾನೆ.

ಅಪಘಾತ ನಡೆದ ಕೂಡಲೇ ಜಮಾಯಿಸಿದ್ದ ನಾಗರೀಕರು ಹರೀಶನ ದೇಹ ಎರಡು ತುಂಡಾಗಿರುವುದನ್ನು ಕಂಡು ಹತ್ತಿರಕ್ಕೆ ಹೋಗಲು ಆಗದೇ ಭಯದಿಂದ ದೂರದಲ್ಲಿಯೇ ನಿಂತು ವೀಕ್ಷಿಸಿದರೇ ಹೊರತು ಯಾರೊಬ್ಬರೂ ಆತನ ಜೀವ ರಕ್ಷಿಸುವ ಪ್ರಯತ್ನ ಮಾಡಲಿಲ್ಲ.

Write A Comment