ರಾಷ್ಟ್ರೀಯ

ಜೆಎನ್ ಯು ಸಂಘರ್ಷ: 10 ಮಂದಿ ಕಾಶ್ಮೀರಿ ತರುಣರು ಜೆಎನ್‌ಯುವಿಗೆ ಬಂದಿರುವ ಶಂಕೆ 

Pinterest LinkedIn Tumblr

JNUWEBದೆಹಲಿ: ಇಲ್ಲಿನ ಜವಾಹರ್‌ಲಾಲ್‌ ನೆಹರೂ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ದೇಶ ವಿರೋಧಿ ಚಟುವಟಿಕೆಗಳ ಪ್ರಕರಣ ದಿನದಿಂದ ದಿನಕ್ಕೆ ಹೊಸ ಆಯಾಮಗಳನ್ನು ಪಡೆಯುತ್ತಿದೆ. ಇದಕ್ಕೆ ಪೂರಕವಾಗಿ ದಿಲ್ಲಿ ಪೊಲೀಸರಿಗೆ ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ, ತಲೆಮರೆಸಿಕೊಂಡಿದ್ದ, ಜೆಎನ್‌ಯು ವಿದ್ಯಾರ್ಥಿ ಉಮರ್‌ ಖಾಲಿದ್‌ ಎಂಬ ವಿದ್ಯಾರ್ಥಿಯು ಪ್ರತಿಭಟನೆ ನಿರತರ ನಡುವೆ ದಿಢೀರನೆ ಕಾಣಿಸಿಕೊಂಡಿರುವುದನ್ನು ವೀಡಿಯೋ ತುಣುಕಿನಲ್ಲಿ ಇಂದು ಪತ್ತೆಹಚ್ಚಿದ್ದಾರೆ.

ಜೆಎನ್‌ಯು ಘಟನೆ ನಡೆಯುವ ಎರಡು ದಿನಗಳ ಮೊದಲೇ, ಅಂದರೆ ಫೆಬ್ರವರಿ 7 ರಂದು ಹತ್ತು ಮಂದಿ ಕಾಶ್ಮೀರಿ ತರುಣರು ಜೆಎನ್‌ಯುವಿಗೆ ಬಂದಿರುವ ಬಗ್ಗೆ ಪೊಲೀಸ್ ಮೂಲಗಳು ತಿಳಿಸಿವೆ.

ಇವರೊಂದಿಗೆ ಉಮರ್‌ ಖಾಲೀದ್‌ ಕಾಣಿಸಿಕೊಂಡಿದ್ದು ಒಂದೆಡೆಯಾದರೆ ಈತನೇ ಜೆಎನ್‌ಯು ಆವರಣದಲ್ಲಿ ನಡೆಸಲಾಗಿದ್ದ ಅಫ್ಜಲ್‌ ಗುರು ಕಾರ್ಯಕ್ರಮದ ಮುಖ್ಯ ಸಂಘಟಕನೇ ಆಗಿದ್ದ ಎನ್ನುವುದು ಗಮನಾರ್ಹ. ಇಂತಹ ಒಂದು ಕಾರ್ಯಕ್ರಮ ನಡೆಸಲು ಖಾಲಿದ್‌ ಕೆಲವು ತಿಂಗಳಿಂದಲೇ ಯೋಜನೆ ಹಾಕಿಕೊಂಡು ಸಿದ್ಧತೆ ನಡೆಸುತ್ತಿದ್ದ ಎಂದು ಮಾದ್ಯಮಗಳು ತಿಳಿಸಿವೆ

ಈ ಎಲ್ಲಾ ವಿದ್ಯಮಾನವನ್ನು ಗಮನಿಸಿದರೆ ಜೆಎನ್‌ಯು ಸಂಘರ್ಷ ಸಂಪೂರ್ಣವಾಗಿ ಪೂರ್ವಯೋಜಿತ ಕೃತ್ಯವಾಗಿದ್ದು, ಉಮರ್‌ ಖಾಲಿದ್‌ನ ಬೆಂಬಲದಲ್ಲಿ ವಿದ್ಯಾರ್ಥಿಗಳ ಗುಂಪೊಂದು ಜೆಎನ್‌ಯು ಕಾರ್ಯಕ್ರಮದ ವೇಳೆ ಅಫ್ಜಲ್‌ ಗುರು ಮತ್ತು ಉಗ್ರ ಮಕ್‌ಬೂಲ್‌ ಭಟ್‌ ಇವರುಗಳ ಸಾವನ್ನು “ನ್ಯಾಯಾಂಗ ಹತ್ಯೆ’ ಎಂದು ಘೋಷಣೆ ಕೂಗಲಾಗಿತ್ತು ಎಂದು ಮಾಧ್ಯಮ ವರದಿ ತಿಳಿಸಿದೆ.

Write A Comment