ಕರ್ನಾಟಕ

ಕಾಂಗ್ರೆಸ್ ಮುಸ್ಲಿಂರ ಓಲೈಕೆ ಪ್ರಯತ್ನವೇ ನಮ್ಮ ಗೆಲುವಿಗೆ ಕಾರಣ: ಈಶ್ವರಪ್ಪ

Pinterest LinkedIn Tumblr

203_04_10_17_Eshwarappa

ಬೆಂಗಳೂರು; ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠವನ್ನು ಕಲಿಸಿದ್ದಾರೆಂದು ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಅವರು ಮಂಗಳವಾರ ಹೇಳಿದ್ದಾರೆ.

ಪಕ್ಷಗಳ ಪ್ರತಿಷ್ಠೆ ಪ್ರಶ್ನೆಯಾಗಿದ್ದ ರಾಜ್ಯ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆಲವು ಸಾಧಿಸಿರುವ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿ ಮಾತನಾಡಿರುವ ಅವರು, ಉಪಚುನಾವಣೆಯ ಆಯ್ಕೆ ಪ್ರಕ್ರಿಯೆಯಿಂದಲೂ ಕಾಂಗ್ರೆಸ್ ನಲ್ಲಿ ಸಾಕಷ್ಟು ಸಮಸ್ಯೆಗಳಿದ್ದವು. ಆಯ್ಕೆ ಪ್ರಕ್ರಿಯೆಲ್ಲಿಯೂ ನಾಯಕರಲ್ಲಿ ಹಲವು ಗೊಂದಲಗಳಿದ್ದವು. ಅಲ್ಲದೆ, ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ ಮುಸ್ಲಿಮರನ್ನು ಓಲೈಕೆ ಮಾಡಲು ಪ್ರಯತ್ನ ಪಟ್ಟಿತ್ತು. ಈ ಎಲ್ಲಾ ಅಂಶಗಳು ಕಾಂಗ್ರೆಸ್ ಮುಳುವಾಗಿ ನಮ್ಮ ಗೆಲುವಿಗೆ ಕಾರಣವಾಯಿತು ಎಂದು ಹೇಳಿದ್ದಾರೆ.

ಕುತೂಹಕಾರಿ ಮೂರು ವಿಧಾಸಭಾ ಕ್ಷೇತ್ರಗಳ ಅಂತಿಮ ಫಲಿತಾಂಶ ಇಂದು ಹೊರಬಿದಿದ್ದು, ಹೆಬ್ಬಾಳ ಹಾಗೂ ದೇವನದುರ್ಗದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಇದರಂತೆ ಬೀದರ್ ನಲ್ಲಿ ಕಾಂಗ್ರೆಸ್ ಕೂಡ ಗೆಲವು ಸಾಧಿಸಿದೆ.

Write A Comment