ಹಾಸನ: ಸಿಯಾಚಿನ್ನಲ್ಲಿ ನಡೆದ ಹಿಮಪಾತದಲ್ಲಿ ಮೃತರಾದ ಯೋಧ ಟಿ.ಟಿ. ನಾಗೇಶ್ ಅವರ ಪಾರ್ಥಿವ ಶರೀರ ಸೋಮವಾರ ಸಂಜೆ 6.30ರ ಸುಮಾರಿಗೆ ನಗರಕ್ಕೆ ತಲುಪಲಿದೆ. ಪಾರ್ಥಿವ ಶರೀರವನ್ನು ರಾತ್ರಿ ಜಿಲ್ಲಾಸ್ಪತ್ರೆಯಲ್ಲಿ ಇರಿಸಲಾಗುವುದು ಎಂದು ಜಿಲ್ಲಾಧಿಕಾರಿ ಉಮೇಶ್ ಎಚ್. ಕುಸಗಲ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಮಂಗಳವಾರ ಬೆಳಗ್ಗೆ 8ರಿಂದ ಒಂದು ಗಂಟೆ ಕಾಲ ಜಿಲ್ಲಾಡಳಿತ ಕಚೇರಿ ಎದುರು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುವುದು. ನಂತರ ಸಕಲ ಸರ್ಕಾರಿ ಗೌರವದೊಂದಿಗೆ ಅವರ ಹುಟ್ಟೂರು ತೇಜೂರಿನಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ನಾಗೇಶ್ ಸೇರಿದಂತೆ ಸಿಯಾಚಿನ್ನಲ್ಲಿ ಮೃತರಾದ 9 ಮಂದಿ ಯೋಧರ ಪಾರ್ಥಿವ ಶರೀರವನ್ನು ಸೋಮವಾರ ಬೆಳಗ್ಗೆ ದೆಹಲಿಗೆ ತರಲಾಗಿದೆ. ದೆಹಲಿಯಿಂದ ವಿಶೇಷ ವಿಮಾನದಲ್ಲಿ ರಾಜ್ಯಕ್ಕೆ ತರಲಾಗುತ್ತಿದೆ.