ಕರ್ನಾಟಕ

ಬೋನಿನಿಂದ ‘ವಿಬ್​ಗಯಾರ್ ಚಿರತೆ’ ಎಸ್ಕೇಪ್, ಮತ್ತೆ ಆತಂಕ

Pinterest LinkedIn Tumblr

chi

ಬೆಂಗಳೂರು: ಮೊನ್ನೆ ಮೊನ್ನೆಯಸ್ಟೇ ಸೆರೆಸಿಕ್ಕ ‘ವಿಬ್​ ಗಯಾರ್ ಚಿರತೆ’ ಈಗ ಬನ್ನೇರುಘಟ್ಟ ಉದ್ಯಾನದ ಬೋನಿನಿಂದ ತಪ್ಪಿಸಿಕೊಂಡು ಪರಾರಿಯಾಗಿದೆ. ಚಿರತೆ ಹೇಗೆ ತಪ್ಪಿಸಿಕೊಂಡಿತು? ಎಲ್ಲಿ ಅವಿತುಕೊಂಡಿದೆ? ಎನ್ನುವ ಬಗ್ಗೆ ಮಾಹಿತಿ ಇಲ್ಲ. ಬನ್ನೇರುಘಟ್ಟ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಸವಿರುವ ಜನ ಈಗ ಆತಂಕಕ್ಕೀಡಾಗಿದ್ದಾರೆ.

chi1

ವರ್ತರು ಸಮೀಪದ ವಿಬ್​ಗಯಾರ್ ಶಾಲೆಯ ಆವರಣದಲ್ಲಿ ಸೇರಿಕೊಂಡ ಚಿರತೆಯನ್ನು ಸುದೀರ್ಘ ಕಾರ್ಯಾಚರಣೆಯ ಬಳಿಕ ಫೆ.7, ಭಾನುವಾರದಂದು ಸೆರೆ ಹಿಡಿಯಲಾಗಿತ್ತು. ಬಳಿಕ ಬನ್ನೇರಿಘಟ್ಟ ರಾಷ್ಟ್ರೀಯ ಉದ್ಯಾನವನದ ಕಾಂಚನಗಂಗ ಟಿ.2 ಬೋನಿನಲ್ಲಿ ಇರಿಸಲಾಗಿತ್ತು. ಆದರೆ ಸೋಮವಾರ ಬೆಳಗ್ಗೆ ನೋಡಿದಾಗ ಬೋನಿನಲ್ಲಿ ಚಿರತೆ ಇರಲಿಲ್ಲ. ತಡರಾತ್ರಿಯೇ ತಪ್ಪಿಸಿಕೊಂಡಿರಬಹುದೆಂದು ಹೆಳಲಾಗುತ್ತಿದೆ.

ಅಧಿಕಾರಿಗಳಿಂದ ಹುಡುಕಾಟ

ಇದೀಗ ಬೋನಿನಿಂದ ತಪ್ಪಿಸಿಕೊಂಡಿರುವ ಚಿರತೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ. ಈಗಾಗಲೇ ಅಕ್ಕಪಕ್ಕದ ನಿವಾಸಿಗಳಿಗೆ ಎಚ್ಚರದಿಂದ ಇರಲು ಸೂಚಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಪಾರ ಮುಖ್ಯ ಕಾರ್ಯದರ್ಶಿ ಮಹೇಂದ್ರಸಿಂಗ್ ಜೈನ್, ಪಿಸಿಸಿಎಫ್ ರವಿ ರಾಲ್ವಾ ಮತ್ತು ಇಡಿ ಸಂತೋಷ್ ಕುಮಾರ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಹುಡುಕಾಟ ನಡೆಸಲು ೬ ತಂಡ ರಚಿಸಲಾಗಿದೆ ಎಂದು ಮಾಹಿತಿ ಸಿಕ್ಕಿದೆ.

ಬೋನಿನಲ್ಲಿದ್ದ ಚಿರತೆ ಹೇಗೆ ತಪ್ಪಿಸಿಕೊಂಡಿತು ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ. ಮೇಲ್ನೋಟಕ್ಕೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಾಗಿರುವಂತೆ ಕಂಡುಬರುತ್ತಿದೆ. ಒಂದು ಮೂಲಗಳ ಪ್ರಕಾರ ಚಿರತೆ ಬೆಳಗ್ಗೆ ಬೋನಿನಿಂದ ಆಚೆ ಬಂದಿರುವುದನ್ನು ಸಿಬ್ಬಂದಿಯೊಬ್ಬರು ನೋಡಿದ್ದರು ಎಂದು ಹೇಳಲಾಗುತ್ತಿದೆ.

ವರದಿ ಕೇಳಿದ ಸಿಎಂ

ಚಿರತೆ ತಪ್ಪಿಸಿಕೊಂಡಿರುವ ಬಗ್ಗೆ ಕೊಂಚ ಗರಂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೋನಿನಲ್ಲಿ ಇರಿಸಲಾಗಿದ್ದ ಚಿರತೆ ಹೇಗೆ ತಪ್ಪಿಸಿಕೊಳ್ಳಲು ಸಾಧ್ಯ? ಈ ಬಗ್ಗೆ ಕೂಡಲೇ ಸಂಬಂಧಪಟ್ಟವರು ವರದಿ ನೀಡಬೇಕು ಎಂದು ಅಧಿಕಾರಿಗಳ ಜತೆ ಮಾತನಾಡಿದ್ದಾಗಿ ಹೇಳಿದ್ದಾರೆ.

Write A Comment